ನೀರಿನ ಬವಣೆಯನ್ನು ಬಿಂಬಿಸುತ್ತೆ ಈ ವೈರಲ್‌ ವಿಡಿಯೋ….!

ನೀರಿನ ಅಭಾವ ತೀವ್ರಗೊಂಡ ಪರಿಣಾಮ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮಹಿಳೆಯರು ಬಾವಿಯ ಒಳಗೆ ಇಳಿದು ನೀರು ತೆಗೆದುಕೊಳ್ಳುತ್ತಿರುವ ಚಿತ್ರಗಳು ವೈರಲ್ ಆಗಿವೆ.

“ನಮಗೆ ಕುಡಿಯಲು ಸ್ವಚ್ಛ ನೀರು ಸಿಗುತ್ತಿಲ್ಲ. ಯಾವುದೇ ರಕ್ಷಣಾ ಸಲಕರಣೆ ಇಲ್ಲದೇ ಅಪಾಯವನ್ನು ಎದುರಿಸಿ ಬಾವಿಗೆ ಇಳಿದು ನೀರು ಸಂಗ್ರಹಿಸುತ್ತೇವೆ. ಮುಂದಿನ ದಿನಗಳಲ್ಲಿ ನಮಗೆ ಸ್ವಚ್ಛವಾದ ನೀರು ಸಿಗಲಿ ಎಂದು ಬಯಸುತ್ತೇವೆ,” ಎಂದು ಕೋಶಿಂಪಾಡಾ ಗ್ರಾಮದ ಮುಖ್ಯಸ್ಥೆ ರೇಷ್ಮಾ ಗೌಲಿ ಸಂದರ್ಶನದಲ್ಲಿ ಹೇಳುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದಾಗಿದೆ.

ಬಾವಿಯ ತಳದಲ್ಲಿ ಅಳಿದುಳಿದಿರುವ ನೀರನ್ನು ಚೊಂಬಿನಲ್ಲಿ ತೆಗೆದು ಹಗ್ಗಗಳಿಗೆ ಕಟ್ಟಿರುವ ಬಕೆಟ್‌ಗಳಿಗೆ ಮಹಿಳೆಯೊಬ್ಬರು ತುಂಬುತ್ತಿರುವುದನ್ನು ನೋಡಬಹುದಾಗಿದೆ. ಈ ನೀರು ಮಣ್ಣು ಮಿಶ್ರಿತವಾಗಿದ್ದು, ಸಾಧ್ಯವಾದಷ್ಟು ಕಸ ತೆಗೆದು ಹಾಕಲೆಂದು ಬಿಂದಿಗೆಗೆ ತುಂಬುವ ಮುನ್ನ ಅದನ್ನು ಸೋಸಲು ಜರಣಿಯೊಂದನ್ನು ಇಟ್ಟಿರುವುದನ್ನು ಸಹ ವಿಡಿಯೋದಲ್ಲಿ ತೋರಲಾಗಿದೆ.

“ಗ್ರಾಮೀಣ ಪ್ರದೇಶದ ಸಂಪನ್ಮೂಲಗಳನ್ನೆಲ್ಲಾ ಕಿತ್ತುಕೊಂಡು, ದನಿಯಿಲ್ಲದ ಗ್ರಾಮಸ್ಥರಿಗೆ ಅನ್ಯಾಯ ಮಾಡಿ ನಗರಗಳನ್ನು ಬೆಳೆಸುತ್ತಿದ್ದೇವೆ,” ಎಂದು ನೆಟ್ಟಿಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read