ಚೀನಾದ ಮಹಿಳೆಯೊಬ್ಬಳು ಜನರಿಗೆ ಮರಳಿನ ಮೂಲಕ ಸಕಾರಾತ್ಮಕ ಸಂದೇಶಗಳನ್ನು ಸಾರುವ ಸಲುವಾಗಿ ಉದ್ಯೋಗ ತೊರೆದು ಸುದ್ದಿಯಾಗಿದ್ದಾಳೆ. ಮಹಿಳೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಬೀಚ್‌ನಲ್ಲಿ ಸ್ಫೂರ್ತಿದಾಯಕ ಸಂದೇಶವನ್ನು ಸಾರುವ ಸಲುವಾಗಿ ಉದ್ಯೋಗ ಬಿಟ್ಟಿದ್ದಾಳೆ. ಫೆಂಗ್ ಎಂಬ ಉಪನಾಮ ಹೊಂದಿರುವ ಮಹಿಳೆ ಸನ್ಯಾ ನಿವಾಸಿ. ಹೈನಾನ್ ಪ್ರಾಂತ್ಯದ ಜನಪ್ರಿಯ ಪ್ರವಾಸಿ ತಾಣವಾಗಿರುವ ಇಲ್ಲಿ ಆಕೆ ಜನರಿಗೆ ಸ್ಫೂರ್ತಿದಾಯಕ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾಳೆ.
ಆಕೆಯ ಹೊಸ ಉದ್ಯೋಗವು ಕೆಲವರಿಗೆ ಅಸಹಜ ಎಂದು ತೋರಿದರೂ ತನಗೆ ಇದು ಗೌರವಾನ್ವಿತ ಜೀವನವನ್ನು ತರುತ್ತದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಫೆಂಗ್ ಅವರ ಕಥೆಯು ಚೀನೀ ಸಾಮಾಜಿಕ ಮಾಧ್ಯಮದಲ್ಲಿ ಹಿಟ್ ಆಗಿದೆ. ಹಲವರು ಈಕೆಯನ್ನು ಅಭಿನಂದಿಸುತ್ತಿದ್ದಾರೆ. ಕೋವಿಡ್ನಿಂದ ಚೀನಾ ಜರ್ಜರಿತವಾಗಿರುವ ಈ ಸಮಯದಲ್ಲಿ ಜನರಲ್ಲಿ ಸ್ಫೂರ್ತಿ ತುಂಬುವುದು ಒಳ್ಳೆಯ ಕೆಲಸ ಎಂದು ಹಲವರು ಶ್ಲಾಘಿಸುತ್ತಿದ್ದಾರೆ.