
ಬ್ರಿಟನ್ನಲ್ಲಿರುವ ಮಹಿಳೆಯೊಬ್ಬರು ತಮ್ಮ ಪ್ರೌಢಶಾಲೆ ತೊರೆದು ಬರೋಬ್ಬರಿ 24 ವರ್ಷಗಳ ಬಳಿಕ ತನ್ನ 42ನೇ ವಯಸ್ಸಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೂರ್ವ ಸ್ಟಾಫರ್ಡ್‌ಶೈರ್‌ನ ಉಟ್ಟೊಕ್ಸೆಟರ್ ನಿವಾಸಿ ಕೆರ್ರಿ ಹೆಮಾನ್ಸ್, ತನ್ನ ಮಗ ಡೆನ್ರಿಚ್ 2017 ರಲ್ಲಿ ತನ್ನ ಪದವಿಪೂರ್ವ ಕೋರ್ಸ್ ಆರಂಭಿಸಿದ ಸಂದರ್ಭದಲ್ಲಿ ನೀನು ಈ ಪದವಿ ಪೂರ್ಣಗೊಳಿಸಿದ ಬಳಿಕ ನಾನು ನಿನ್ನ ರೀತಿಯಲ್ಲೇ ಪದವಿ ಪೂರೈಸುತ್ತೇನೆ ಎಂದು ಹೇಳಿದ್ದರಂತೆ.
ಇದು ನಿಜಕ್ಕೂ ಒಂದು ವಿಭಿನ್ನ ಪ್ರಯತ್ನವಾಗಿದೆ. ಕ್ಯಾಂಪಸ್ನಲ್ಲಿ ಇರುವ ಅನುಭವವೂ ನಿಜಕ್ಕೂ ಅಸಾಧಾರಣವಾಗಿತ್ತು. ವಿದ್ಯಾರ್ಥಿಗಳೊಂದಿಗೆ ಕಳೆದ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ ಅಂತಾ ಕೆರ್ರಿ ಹೆಮಾನ್ಸ್ ಹೇಳಿದ್ದಾರೆ.
ಈ ಮಹಿಳೆಯು ತನ್ನ 18 ವರ್ಷ ಪ್ರಾಯಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಇದಾದ ಬಳಿಕ ತಾಯಿಯಾದರು. ಇದರಿಂದ ಅವರಿಗೆ ಮುಂದಿನ ಶಿಕ್ಷಣ ಕಲಿಯಲು ಆಗಲಿಲ್ಲ ಎಂದು ಕೆರ್ರಿ ಹೆಮಾನ್ಸ್ ಹೇಳಿದ್ದಾರೆ.
ಕೆಲವು ವರ್ಷಗಳ ಬಳಿಕ ಕೆರ್ರಿ ತನ್ನ ಸಂಸಾರದ ಸಮೇತ ಬ್ರಿಟನ್ಗೆ ವಲಸೆ ಹೋದರು. ಇಲ್ಲಿಂದ ಅವರಿಗೆ ಮತ್ತೊಮ್ಮೆ ಶಿಕ್ಷಣ ಮುಂದುವರಿಸಲು ಮತ್ತೊಂದು ತಡೆ ಸಿಕ್ಕಂತಾಗಿತ್ತು.
ಇದಾದ ಬಳಿಕ ಸ್ಕಾಟ್ಲೆಂಡ್, ಜರ್ಮನಿ, ಸೈಪ್ರಸ್, ಹೀಗೆ ಒಂದಿಲ್ಲೊಂದು ಕಡೆಗೆ ವಲಸೆ ಹೋಗೋದು ಮುಂದುವರಿದಿತ್ತು. ಇದೆಲ್ಲದರ ಬಳಿಕ ಇದೀಗ ನಾನು ನನ್ನ ಪದವಿ ಕೊನೆಗೂ ಪೂರ್ಣಗೊಳಿಸಿದ್ದು ನನ್ನ ಒಡಹುಟ್ಟಿದವರಿಗೆ ಮಾದರಿಯಾಗಿದ್ದೇನೆ ಎಂದು ಕೆರ್ರಿ ಹೇಳಿಕೊಂಡಿದ್ದಾರೆ.