ಜಾಹ್ನವಿ ಕಪೂರ್​ ಸೌಂದರ್ಯದ ಕುರಿತು ಮಹಿಳೆ ಟ್ವೀಟ್​: ನೆಟ್ಟಿಗರ ಆಕ್ರೋಶ

ಸಿನಿ ತಾರೆಯರು ಸದಾ ಒಂದಿಲ್ಲೊಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿ ಇರುತ್ತಾರೆ. ಆಲಿಯಾ ಭಟ್, ಜಾಹ್ನವಿ ಕಪೂರ್‌ನಿಂದ ವರುಣ್ ಧವನ್ ಮತ್ತು ಅರ್ಜುನ್ ಕಪೂರ್……. ಹೀಗೆ ಬಹುತೇಕ ಎಲ್ಲಾ ಸ್ಟಾರ್ ಕಿಡ್​ಗಳು ಸ್ವಲ್ಪ ಹೆಚ್ಚಿನ ರೀತಿಯಲ್ಲಿ ಈಗ ಚರ್ಚೆ, ಗಾಸಿಪ್​ಗಳ ಭಾಗವಾಗುತ್ತಾರೆ.

ಈ ಬಾರಿ ಜಾಹ್ನವಿ ಕಪೂರ್ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೆಲವು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದು, ಇದೀಗ ಚರ್ಚೆಯ ವಸ್ತುವಾಗಿದೆ.

ಅದೇನೆಂದರೆ “ಕ್ರೌನಿಸ್ಟ್” ಎಂಬ ಹೆಸರಿನ ಬಳಕೆದಾರರು ಟ್ವಿಟರ್​ನಲ್ಲಿ ನಟಿಯ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು, “ದೇವರು ಇರುವುದು ನಿಜ. ಜಾಹ್ನವಿ ಕಪೂರ್​ಳ ಪ್ಲಾಸ್ಟಿಕ್ ಸರ್ಜನ್ ದೇವರು” ಎಂದು ಬರೆದಿದ್ದಾರೆ.

ಜಾಹ್ನವಿ ಸುಂದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮುನ್ನ ಆಕೆಯ ಮುಖಚರ್ಯೆಯನ್ನು ಸುಂದರವಾಗಿ ರೂಪುಗೊಳಿಸಲಾಗಿದೆ ಎಂದು ಬರೆದಿರುವುದು ಜಾಹ್ನವಿ ಕಪೂರ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಜಾಹ್ನವಿ ಕಪೂರ್​ ತಾಯಿ ನಟಿ ಶ್ರೀದೇವಿ ಕೂಡ ಮೂಗಿನ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಹಲವು ನಟಿಯರು ಪ್ಲಾಸ್ಟಿಕ್​ ಸರ್ಜರಿ ಮೂಲಕ ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವಂತೆ ಜಾಹ್ನವಿ ಕಪೂರ್​ ಕೂಡ ಮಾಡಿಕೊಂಡಿದ್ದಾರೆ ಎಂದು ಟ್ವಿಟರ್​ನಲ್ಲಿ ಬರೆಯಲಾಗಿದೆ.

ಇದನ್ನು ಓದಿದ ಬಳಕೆದಾರರು ಜಾಹ್ನವಿ ಕಪೂರ್​ಳ ಸೌಂದರ್ಯ ನೋಡಿ ಅಸೂಯೆಯಿಂದ ಹೀಗೆ ಬರೆದಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.

https://twitter.com/krownnist/status/1618995735193845762?ref_src=twsrc%5Etfw%7Ctwcamp%5Etweetembed%7Ctwterm%5E161

https://twitter.com/tharshini_/status/1619530111203819520?ref_src=twsrc%5Etfw%7Ctwcamp%5Etweetembed%7Ctwterm%5E1619530111203819520%7Ctwgr%5Edfff87e8f416fdf41882b1dfd11e588f528acc26%7Ctwcon%5Es1_&ref_url=https%3A%2F%2Fwww.news18.com%2Fbuzz%2Fwoman-gets-slammed-for-attributing-janhvi-kapoors-beauty-to-a-plastic-surgeon-6943777.html

https://twitter.com/JuInAWonderland/status/1619356607674220546?ref_src=twsrc%5Etfw%7Ctwcamp%5Etweetembed%7Ctwterm%5E1619356607674220546%7Ctwgr%5Edfff87e8f416fdf41882b1dfd11e588f528acc26%7Ctwcon%5Es1_&ref_url=https%3A%2F%2Fwww.news18.com%2Fbuzz%2Fwoman-gets-slammed-for-attributing-janhvi-kapoors-beauty-to-a-plastic-surgeon-6943777.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read