ಆಡಿ ಬೆಳೆಯುವ ವಯಸ್ಸಲ್ಲಿ ’ಭಯ್ಯಾ’ ಎಂದು ಕರೆಯುತ್ತಿದ್ದವನನ್ನೇ ಮದುವೆಯಾದ ಮಹಿಳೆ

ಮಹಿಳೆಯರು ತಮಗಿಂತ ಹಿರಿಯ ಪುರುಷರನ್ನು ’ಅಣ್ಣಾ’ ಅಥವಾ ’ಭಯ್ಯಾ’ ಎಂದು ಕರೆಯುವುದು ಸಾಮಾನ್ಯ. ಇದೇ ವೇಳೆ ಪುರುಷರು ತಮಗಿಂತ ಸಣ್ಣವರನ್ನು ’ಸಹೋದರಿ’ ’ದೀದಿ’ ಎಂದು ಕರೆಯುವುದು ಸಹ.

ವಯಸ್ಸಿನ ಅಂತರದ ಕಾರಣದಿಂದ ಎಂಟು ವರ್ಷಗಳ ಮಟ್ಟಿಗೆ ಯಾರನ್ನು ’ಭಯ್ಯಾ’ ಎಂದು ಕರೆಯುತ್ತಿದ್ದಳೋ ಅದೇ ವ್ಯಕ್ತಿಯನ್ನು ಮದುವೆಯಾದ ಮಹಿಳೆಯೊಬ್ಬರು ಸುದ್ದಿಯಲ್ಲಿದ್ದಾರೆ. ವಿನಿ ಹೆಸರಿನ ಈ ಮಹಿಳೆ ತಮ್ಮ ಪತಿ ಜಯ್‌ರನ್ನು ಎಂಟು ವರ್ಷಗಳ ಮಟ್ಟಿಗೆ ಅಣ್ಣ ಎಂದೇ ಸಂಬೋಧಿಸುತ್ತಿದ್ದರು. ತಾವಿಬ್ಬರೂ ಸಂಬಂಧಿಗಳು ಎಂದು ಸಹ ವಿನಿ ಹೇಳಿಕೊಂಡಿದ್ದಾರೆ.

’ವಿನ್‌ಅಂಡ್‌ಜಯ್’ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಲಾಗಿದ್ದು, ತಾವು ಚಿಕ್ಕವರಿದ್ದಾಗ ತೆಗೆಸಿದ ಫೋಟೋವನ್ನು ಇಲ್ಲಿ ನೋಡಬಹುದಾಗಿದೆ. ತಾವು ಜಯ್‌ರನ್ನು ಮದುವೆಯಾಗಿದ್ದು, ಇಬ್ಬರಿಗೂ ಈಗ ಮಕ್ಕಳಿದ್ದಾರೆ ಎಂದು ವಿನಿ ಹೇಳಿಕೊಂಡಿದ್ದಾರೆ.

“ನಾವು ಸಂಬಂಧಿಕರು, ನಮ್ಮ ವಯಸ್ಸಿನ ಅಂತರದ ಕಾರಣದಿಂದ ನಾನು ಅವರನ್ನು ಭಯ್ಯಾ ಎಂದು ವರ್ಷಗಳ ಮಟ್ಟಿಗೆ ಕರೆಯುತ್ತಿದ್ದೆ. ಆವಾಗ ಭಯ್ಯಾ ಆಗಿದ್ದವರು ಈಗ ಸಾಯಾನ್ ಆಗಿದ್ದಾರೆ,” ಎಂದು ಪೋಸ್ಟ್‌ಗೆ ಕ್ಯಾಪ್ಷನ್ ಹಾಕಲಾಗಿದೆ.

https://youtu.be/BcLVaY3IMDk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read