ಭಾರತವು ಮೈಕ್ರೋಸಾಫ್ಟ್ ಒಡೆತನದ ಡೆವಲಪರ್ ಪ್ಲಾಟ್‌ಫಾರ್ಮ್ ಗಿಟ್‌ಹಬ್‌ಗೆ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ಈ ಬೆಳವಣಿಗೆಯಲ್ಲಿ ಭಾರತ ಅಮೆರಿಕಾಗಿಂತಲೂ ಮುಂದಿದೆ ಎಂದು ಗಿಟ್‌ಹಬ್ ಸಿಇಒ ಥಾಮಸ್ ಡೊಹ್ಮ್ಕೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಭಾರತ ದೇಶವು ಎಐ (ಕೃತಕ ಬುದ್ಧಿಮತ್ತೆ) ಯಲ್ಲಿ ಜಗತ್ತನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿನ ಹೆಚ್ಚಿನ ಸಂಖ್ಯೆಯ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು, ಎಂಜಿನಿಯರಿಂಗ್ ವಿಭಾಗಗಳು ಮತ್ತು ಜನಸಂಖ್ಯೆಯ ಸಂಪೂರ್ಣ ಗಾತ್ರವು ಈ ಬೆಳವಣಿಗೆಗೆ ಕೆಲ ಕಾರಣಗಳಾಗಿವೆ ಎನ್ನಲಾಗಿದೆ.
ಸುಮಾರು 21 ಮಿಲಿಯನ್ ಡೆವಲಪರ್‌ಗಳೊಂದಿಗೆ ಗಿಟ್ ಹಬ್ ಅಮೆರಿಕದ ಅಗ್ರ ಮಾರುಕಟ್ಟೆಯಾಗಿದೆ ಆದರೆ ಪ್ರಸ್ತುತ ಬೆಳವಣಿಗೆಯ ವೇಗದಲ್ಲಿ 2027 ರ ವೇಳೆಗೆ ಭಾರತವು ಅಮೆರಿಕವನ್ನು ಹಿಂದಿಕ್ಕುತ್ತದೆ ಎಂದು ಥಾಮಸ್ ಡೊಹ್ಮ್ಕೆ ನಿರೀಕ್ಷಿಸಿದ್ದಾರೆ.
“ಭಾರತದಲ್ಲಿರುವ ಕಂಪ್ಯೂಟರ್ ಸೈನ್ಸ್ ಪದವೀಧರರನ್ನು ನೋಡಿದಾಗ, ನೀವು ಬಹುಶಃ ಆ ನಂತರದ ದಿನಗಳಲ್ಲಿ ಮೊದಲ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ. ಇಲ್ಲಿ ಡೆವಲಪರ್ ಶಕ್ತಿಯ ದೊಡ್ಡ ಏರಿಕೆ ಇದೆ” ಎಂದು ಗಿಟ್‌ಹಬ್ ಸಿಇಓ ಥಾಮಸ್ ಡೊಹ್ಮ್ಕೆ ಜೂನ್ 11 ರಂದು ಬೆಂಗಳೂರಿನಲ್ಲಿ ನಡೆದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಜೂನ್ 11 ರಂದು ಭಾರತದಲ್ಲಿ 15.4 ಮಿಲಿಯನ್ ಡೆವಲಪರ್‌ಗಳು ಗಿಟ್ ಹಬ್ ಪ್ಲಾಟ್ ಫಾರ್ಮ್ ಬಳಸಿದ್ದಾರೆ. ಇದು ಶೇ. 33ರಷ್ಟು ಬೆಳವಣಿಗೆಯಾಗಿದೆ. 2023 ರ ಅಂತ್ಯದ ವೇಳೆಗೆ ಭಾರತದಲ್ಲಿ 13.2 ಮಿಲಿಯನ್ ಡೆವಲಪರ್‌ಗಳನ್ನು ಹೊಂದಿತ್ತು.
ಗಿಟ್ ಹಬ್ ಪ್ರಪಂಚದಾದ್ಯಂತ 100 ಮಿಲಿಯನ್ ಡೆವಲಪರ್ ಖಾತೆಗಳನ್ನು ಹೊಂದಿದೆ.