ಮದುವೆ ಬಗ್ಗೆ ಫ್ಯಾನ್ಸ್ ಗೆ ಅಪ್ ಡೇಟ್ ಕೊಟ್ಟ ನಟ ಪ್ರಭಾಸ್

ಬಹುನಿರೀಕ್ಷಿತ ಆದಿಪುರುಷ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮಂಗಳವಾರ ಸಂಜೆ ತಿರುಪತಿಯಲ್ಲಿ ನಡೆದ ಆದಿಪುರುಷ್ ಟ್ರೇಲರ್ ಬಿಡುಗಡೆ ಅದ್ಧೂರಿ ಸಮಾರಂಭದಲ್ಲಿ ಭಾಷಣದ ವೇಳೆ ಗುಂಪಿನಲ್ಲಿದ್ದ ಪ್ರಭಾಸ್ ಅವರ ಅಭಿಮಾನಿಗಳು, ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದರು. “ಮದುವೆಯೇ? ಮುಂದೊಂದು ದಿನ ತಿರುಪತಿಯಲ್ಲಿ ಮದುವೆಯಾಗುತ್ತೇನೆ ಎಂದು ಪ್ರಭಾಸ್ ಹೇಳಿದ್ದಾರೆ. ಪ್ರಭಾಸ್ ಅವರ ಈ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿದೆ.

ಕೆಲ ದಿನಗಳಿಂದ ಪ್ರಭಾಸ್ ಮತ್ತು ನಟಿ ಕೃತಿ ಸನನ್ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಗಳಿವೆ. ಆದರೆ ಅದನ್ನು ನಟ ಪ್ರಭಾಸ್ ನಿರಾಕರಿಸಿದ್ದಾರೆ.

ಜೂನ್ 16 ರಂದು ಬಿಡುಗಡೆಗೆ ಸಿದ್ಧವಾಗುತ್ತಿರುವ ಓಂ ರಾವುತ್ ಅವರ ಆದಿಪುರುಷ ಚಿತ್ರದ ಟ್ರೇಲರ್ ಅನ್ನು ಮಂಗಳವಾರ ಸಂಜೆ ತಿರುಪತಿಯಲ್ಲಿ ಬಿಡುಗಡೆ ಮಾಡಲಾಯಿತು. ರಾಮಾಯಣದ ಆಧುನಿಕ ರೂಪಾಂತರವಾಗಿರುವ ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಕೃತಿ ಸನನ್ ಜಾನಕಿಯಾಗಿ ನಟಿಸಿದ್ದಾರೆ. ಸುಮಾರು 450 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿರುವ ಆದಿಪುರುಷ್ ಸಿನಿಮಾವನ್ನ ಮೂಲತಃ ಹಿಂದಿಯಲ್ಲಿ ಚಿತ್ರೀಕರಿಸಲಾಗಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡಕ್ಕೆ ಡಬ್ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read