ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಲಂಡನ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಹಳೆಯ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಹಿರಿಯ ಪತ್ರಕರ್ತರೊಬ್ಬರು ರಾಹುಲ್ ಗಾಂಧಿಗೆ ಸಲಹೆ ನೀಡಿರುವುದು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಭಾಷಣವೊಂದರಲ್ಲಿ ರಾಹುಲ್ ಗಾಂಧಿ ಭಾರತದ ಕುರಿತಾದ ಟೀಕೆಗಳ ಬಗ್ಗೆ ಪ್ರಸ್ತಾಪಿಸಿ ಹಿರಿಯ ಪತ್ರಕರ್ತರೊಬ್ಬರು ರಾಹುಲ್ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಭಾರತಕ್ಕೆ ಸಂಬಂಧಿಸಿದ ವಿಷಯಗಳನ್ನು ಲಂಡನ್ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಹೇಗೆ ನಿರಾಕರಿಸಿದರು ಎಂಬುದನ್ನು ನೆನಪಿಸಿ ಸಲಹೆ ನೀಡಿದರು.
ಅವರು ಪ್ರಸ್ತಾಪಿದಂತೆ ಹಿರಿಯ ಪತ್ರಕರ್ತ, ಇಂದಿರಾಗಾಂಧಿಯವರು ತಮಗೆ ಅಕ್ಕ ಇದ್ದಂತೆ ಎಂದು ಹೇಳಿ ಒಮ್ಮೆ ಇಂದಿರಾ ಗಾಂಧಿ ಲಂಡನ್ ಗೆ ಬಂದಾಗ ಭಾರತ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡಲು ಮುಂದಾಗಲಿಲ್ಲ ಎಂದು ಭಾರತೀಯ ಪತ್ರಕರ್ತರ ಸಂಘ (IJA) ಆಯೋಜಿಸಿದ ಸಂವಾದಾತ್ಮಕ ಅಧಿವೇಶನದಲ್ಲಿ ಹಿರಿಯ ಪತ್ರಕರ್ತರು ಪ್ರಸ್ತಾಪಿಸಿದ್ದರು. ಮಾರ್ಚ್ 2023 ರಲ್ಲಿ ರಾಹುಲ್ ಗಾಂಧಿಯವರ ಯುಕೆ ಪ್ರವಾಸದ ಸಮಯದಲ್ಲಿ ಮಾಡಿದ್ದ ಭಾಷಣದ ಬಗ್ಗೆ ಪ್ರಸ್ತಾಪಿಸಿ, ಹಿರಿಯ ಪತ್ರಕರ್ತರು ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.
“ನನಗೆ ನಿಮ್ಮ ಅಜ್ಜಿ ಶ್ರೀಮತಿ ಇಂದಿರಾ ಗಾಂಧಿ ಬಗ್ಗೆ ಗೊತ್ತು. ಶ್ರೀಮತಿ ಇಂದಿರಾ ಗಾಂಧಿ, ನಿಮ್ಮ ಅಜ್ಜಿ ನನಗೆ ಅಕ್ಕನಂತೆ. ಅವರು ಅದ್ಭುತ ಮಹಿಳೆ. ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಜೈಲಿನಲ್ಲಿ ಬಂಧಿಸಲ್ಪಟ್ಟ ಅವರು ಇಲ್ಲಿಗೆ ಬಂದಿದ್ದರು. ಲಂಡನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಅವರನ್ನು ‘ಭಾರತದಲ್ಲಿ ಜೈಲಿನಲ್ಲಿ ನಿಮ್ಮ ಅನುಭವವೇನು?’ ಎಂದಾಗ ನಿಮ್ಮ ಅಜ್ಜಿ ಈ ಸಮ್ಮೇಳನದಲ್ಲಿ ನಾನು ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.
“ಈಗ ನೀವು ಕೇಂಬ್ರಿಡ್ಜ್ ನಲ್ಲಿ ಮಾಡಿದ ಭಾಷಣಕ್ಕಾಗಿ ನಿಮ್ಮ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಶ್ರೀಮತಿ ಇಂದಿರಾ ಗಾಂಧಿಯವರು ಹೇಳಿದ್ದನ್ನು ನೀವು ಸ್ವಲ್ಪವಾದರೂ ಪಾಠದ ರೂಪದಲ್ಲಿ ತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದು ಗಮನ ಸೆಳೆಯುತ್ತಿದೆ.