ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾದಾಗ ಪಾದಗಳಲ್ಲಿ ಕಂಡುಬರುತ್ತದೆ ಇಂಥಾ ಲಕ್ಷಣ, ಚಿಕಿತ್ಸೆ ಪಡೆಯದಿದ್ದರೆ ಆಗಬಹುದು ಅಪಾಯ….!

ಅಧಿಕ ಕೊಲೆಸ್ಟ್ರಾಲ್ ಒಂದು ಗಂಭೀರವಾದ ಆರೋಗ್ಯ ಸ್ಥಿತಿ. ರಕ್ತದಲ್ಲಿ ಕೊಲೆಸ್ಟ್ರಾಲ್ ಎಂಬ ಮೇಣದಂತಹ ಕೊಬ್ಬಿನ ಅಂಶ ಅತಿಯಾಗುವ ಲಕ್ಷಣ ಇದು. ಚಿಕಿತ್ಸೆ ನೀಡದೆ ಬಿಟ್ಟರೆ ಕೊಲೆಸ್ಟ್ರಾಲ್‌ ನಮ್ಮ ಹೃದಯದೊಳಗೆ ವಿನಾಶವನ್ನು ಉಂಟುಮಾಡಬಹುದು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ.

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದ ನಂತರ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ಪಾದಗಳಲ್ಲಿ ಕೆಲವೊಂದು ಸಂಕೇತಗಳು, ಮುನ್ಸೂಚನೆಗಳು ಕಂಡುಬರುತ್ತವೆ.

ಕಾಲುಗಳ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ ಅದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಕಾಲು ನೋವು, ಸೆಳೆತ ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ.

ಕೊಲೆಸ್ಟ್ರಾಲ್ ಕಾಲುಗಳ ಅಪಧಮನಿಗಳನ್ನು ಕಿರಿದಾಗಿಸಿದಾಗ, ಅದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಪಾದಗಳಲ್ಲಿ ಶೀತದ ಅನುಭವವಾಗಬಹುದು.

ಕೊಲೆಸ್ಟ್ರಾಲ್ ಹೆಚ್ಚಾದಾಗ ಪಾದಗಳಲ್ಲಿ ಗಾಯದ ಅಪಾಯ ಕೂಡ ಹೆಚ್ಚಾಗಿರುತ್ತದೆ. ಕಾಲುಗಳ ಚರ್ಮದ ಬಣ್ಣ ಕೂಡ ಬದಲಾಗಬಹುದು. ಕಾಲುಗಳು ಹೆಚ್ಚು ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ.

ಕೆಟ್ಟ ಕೊಲೆಸ್ಟ್ರಾಲ್‌ ದೇಹದಲ್ಲಿ ಹೆಚ್ಚಾದಾಗ ಪಾದಗಳಲ್ಲಿ ಮರಗಟ್ಟುವಿಕೆ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಅಪಧಮನಿಗಳ ಒಳಗೆ ಪ್ಲೇಕ್ ನಿರ್ಮಾಣದಿಂದಾಗಿ ಕಡಿಮೆ ರಕ್ತದ ಹರಿವಿನಿಂದ ಇದು ಉಂಟಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read