ಮೈಸೂರು: ವ್ಹೀಲಿಂಗ್ ಮಾಡುವ ಪುಂಡರನ್ನು ತಡೆಯಬೇಕಾದ ಪೊಲೀಸ್ ಸಿಬ್ಬಂದಿಯ ಮಕ್ಕಳೇ ಇಂತಹ ಹುಚ್ಚಾಟ ನಡೆಸುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಹೀಲಿಂಗ್ ಮಾಡುತ್ತಿದ್ದ ಮಹಿಳಾ ಪಿಎಸ್ ಐ ಪುತ್ರನನ್ನು ಸಂಚಾರಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಪಿಎಸ್ ಐ ಪುತ್ರನೊಬ್ಬ ನಗರದ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದ. ಈ ವಿಡಿಯೋ ಗಮನಿಸಿದ ಮೈಸೂರಿನ ಸಿದ್ಧಾರ್ಥ ನಗರ ಸಂಚಾರಿ ಪೊಲೀಸರು ಆರೋಪಿ ಸೈಯದ್ ಐಯಾನ್ ನನ್ನು ಬಂಧಿಸಿದ್ದಾರೆ.
ಸೈಯದ್ ಐಯಾನ್ ಮೈಸೂರಿನ ರಿಂಗ್ ರಸ್ತೆ, ರಾಜೀವ್ ನಗರಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ವ್ಹೀಲಿಂಗ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ. ಇದೀಗ ವ್ಹೀಲಿಂಗ್ ಪುಂಡಾಟಕ್ಕೆ ಮಹಿಳಾ ಪಿಎಸ್ ಐ ಪುತ್ರನೇ ಪೊಲೀಸರ ಅತಿಥಿಯಾಗಿದ್ದಾನೆ.