ರಾಹುಕಾಲದ ಹೆಸರು ಕೇಳಿದ ತಕ್ಷಣ ಜನರು ಭಯಭೀತರಾಗುತ್ತಾರೆ. ರಾಹುಕಾಲದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ. ರಾಹುಕಾಲ ಎಂದರೇನು? ಜನರು ಅದಕ್ಯಾಕೆ ಭಯಪಡುತ್ತಾರೆ? ಈ ಅವಧಿಯ ಪರಿಣಾಮ ಏನು ಎಂಬುದನ್ನೆಲ್ಲ ವಿವರವಾಗಿ ನೋಡೋಣ.
ರಾಹುಕಾಲವು ಭೂಮಿಯ ಮೇಲೆ ರಾಹು ತನ್ನ ದೃಷ್ಟಿಯನ್ನು ಬೀರುವ ಸಮಯವಾಗಿದೆ. ರಾಹುಕಾಲವು ಹಗಲಿನಲ್ಲಿ ಪ್ರತಿದಿನ ಸಂಭವಿಸುತ್ತದೆ. ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಯಾವುದೇ ಸಮಯದಲ್ಲಿ ಇದು ಸಂಭವಿಸಬಹುದು. ಇದರ ಅವಧಿ 90 ನಿಮಿಷಗಳು ಅಂದರೆ ಒಂದೂವರೆ ಗಂಟೆ.
ಭೂಮಿಯ ಮೇಲೆ ರಾಹುವಿನ ದೃಷ್ಟಿ ಇರುವುದರಿಂದ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧ. ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಿದರೆ ಅದಕ್ಕೆ ವಿಘ್ನ ಬರುತ್ತದೆ ಎಂಬ ನಂಬಿಕೆಯಿದೆ.
ಯಾವುದೇ ಹೊಸ ಕೆಲಸವನ್ನು ರಾಹುಕಾಲದಲ್ಲಿ ಪ್ರಾರಂಭಿಸಬಾರದು. ಈ ಅವಧಿಯು ಕೆಲಸವನ್ನು ಹಾಳು ಮಾಡುತ್ತದೆ ಎಂಬ ಕಾರಣಕ್ಕೆ ಜನರು ಭಯಪಡುತ್ತಾರೆ.
ರಾಹುಕಾಲವನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಾಹುವಿನ ದೃಷ್ಟಿ ಯಾರ ಮೇಲಾದರೂ ಬಿದ್ದರೆ ಅವನ ಕೆಟ್ಟ ಕಾಲ ಶುರುವಾಗಿದೆ ಎಂದರ್ಥ.
ರಾಹುಕಾಲವು ನಮ್ಮ ಮೇಲೆ ಪ್ರಭಾವ ಬೀರಿದರೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಮನಸ್ಸು ಮತ್ತು ಮೆದುಳು ಸ್ಥಿರವಾಗಿರುವುದಿಲ್ಲ. ಏಕಾಗ್ರತೆಗೆ ಭಂಗ ಬರಬಹುದು. ಅದಕ್ಕಾಗಿಯೇ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವಾಗ ರಾಹುಕಾಲದ ಬಗ್ಗೆ ಗಮನಹರಿಸಬೇಕು. ರಾಹುಕಾಲದಲ್ಲಿ ಶುಭಕಾರ್ಯಗಳನ್ನು ನೆರವೇರಿಸಬಾರದು.