ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬ ಅಸಹ್ಯವಾಗಿ ನಡೆದುಕೊಂಡಿದ್ದಾನೆ. ವೈದ್ಯೆಯೊಬ್ಬಳೆ ಇದ್ದ ಸಮಯದಲ್ಲಿ ಆಸ್ಪತ್ರೆಗೆ ಬಂದ ಕಾಮುಕ ತನ್ನ ಖಾಸಗಿ ಅಂಗವನ್ನು ತೋರಿಸಿದ್ದಾನೆ. ಆತನನ್ನು ನೋಡಿ ವೈದ್ಯೆ ಕಿರುಚಿದ್ದಾಳೆ. ಅಲ್ಲಿಂದ ಹೋಗುವಂತೆ ಹೇಳಿದ್ದಾಳೆ. ಆಕೆ ವಿಡಿಯೋ ಮಾಡ್ತಿರೋದನ್ನು ನೋಡಿದ ವ್ಯಕ್ತಿ, ಅಲ್ಲಿಂದ ಓಡಿದ್ದಲ್ಲದೆ ಸೈಕಲ್ ಹತ್ತಿ ಹೋಗಿದ್ದಾನೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಜನರು ಶಾಕ್ ಆಗಿದ್ದಾರೆ. ವ್ಯಕ್ತಿಯನ್ನು ಬಂಧಿಸುವಂತೆ ಬಳಕೆದಾರರು ಆಗ್ರಹಿಸಿದ್ದಾರೆ.
ಕೊಲ್ಕತ್ತಾದಲ್ಲಿ ಅತ್ಯಾಚಾರ- ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಈ ವಿಡಿಯೋ ಮತ್ತಷ್ಟು ಭಯಹುಟ್ಟಿಸಿದೆ. ಹಾಡ ಹಗಲಿನಲ್ಲಿಯೇ ಪುಂಡರು ತಮ್ಮ ಅಟ್ಟಹಾಸ ಮೆರೆಯುತ್ತಿದ್ದು, ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವುದು ಸ್ಪಷ್ಟವಾಗ್ತಿದೆ.
https://twitter.com/AlphaVictorVA/status/1822943474833854544?ref_src=twsrc%5Etfw%7Ctwcamp%5Etweetembed%7Ctwterm%5E1822943474833854544%7Ctwgr%5Eef24bd7c2596d6bfed76c0c36c9ba5c9b2a50ad8%7Ctwcon%5Es1_&ref_url=https%3A%2F%2Fwww.latestly.com%2Fsocially%2Findia%2Fnews%2Fwest-bengal-shocker-man-flashes-his-private-parts-to-woman-doctor-flees-on-bicycle-after-she-raises-alarm-disturbing-video-goes-viral-6185634.html