
ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಗಾಗಿ ಜನರು ಚಿತ್ರ ವಿಚಿತ್ರ ಮತ್ತು ವಿಶೇಷವಾಗಿ ವಿಡಿಯೋ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿಯ ಪ್ರಯತ್ನವೊಂದನ್ನ ಮಹಿಳೆಯೊಬ್ಬರು ಮಾಡಿದ್ದು ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆದರಿಸಲು ಸಿನಿಮಾ ಪಾತ್ರದ ವೇಷ ಧರಿಸಿದ್ದಾಳೆ.
2007 ರ ಬಾಲಿವುಡ್ ಚಲನಚಿತ್ರ ‘ಭೂಲ್ ಭುಲೈಯಾ’ ದ ‘ಮಂಜುಲಿಕಾ’ ವೇಷ ಧರಿಸಿರುವುದನ್ನು ತೋರಿಸುವ ವೀಡಿಯೊ ಈಗ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಹಳದಿ ಬಣ್ಣದ ಸೀರೆಯುಟ್ಟ ಮಹಿಳೆಯು ಕೆದರಿದ ಕೂದಲು, ಕೆಲವು ಆಭರಣಗಳು ಮತ್ತು ಮುಖದ ಮೇಲೆ ಅಸ್ತವ್ಯಸ್ತವಾಗಿರುವ ಮೇಕ್ಅಪ್‌ನೊಂದಿಗೆ ನೋಯ್ಡಾ ಮೆಟ್ರೋವನ್ನು ಪ್ರವೇಶಿಸುತ್ತಿರುವುದು ಕಂಡುಬರುತ್ತದೆ.
ಮೆಟ್ರೋ ಕಂಪಾರ್ಟ್‌ಮೆಂಟ್‌ನಲ್ಲಿ ಓಡಾಡುತ್ತಾ ‘ಮಂಜುಲಿಕಾ’ ಪಾತ್ರದ ಮೂಲಕ ಜನರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಆರಾಮವಾಗಿ ಕುಳಿತಿರುವ ಜನರ ಬಳಿಗೆ ಬರುವುದು, ತನ್ನ ಕೂಗು ಮತ್ತು ಸನ್ನೆಗಳ ಮೂಲಕ ಅವರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿರುವುದನ್ನು ಸಹ ಕಾಣಬಹುದು. ಆದರೆ ಈ ಬಗ್ಗೆ ಮೆಟ್ರೋ ಪ್ರಯಾಣಿಕರು ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿರುವುದನ್ನ ನೋಡಬಹುದು.
ಏತನ್ಮಧ್ಯೆ ವೀಡಿಯೊಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಇದನ್ನು ನಿರುಪದ್ರವ ವಿನೋದ ಎಂದು ಕರೆದರೆ, ಇತರರು ಮಹಿಳೆ ಇತರ ಪ್ರಯಾಣಿಕರಿಗೆ ವಿಶೇಷವಾಗಿ ಮಕ್ಕಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
https://youtu.be/umpmelHDLYA