ಆನ್​ ಲೈನ್​ ತರಗತಿಯ ವೇಳೆ ಉಪನ್ಯಾಸಕಿಯ ರಂಪಾಟ: ಆಡಿಯೋ ವೈರಲ್​

ಆನ್​ಲೈನ್​ ತರಗತಿಯ ವೇಳೆಯೇ ಕಾಲೇಜಿನ ಉಪನ್ಯಾಸಕಿಯೊಬ್ಬರು ಕಿರುಕುಳದ ಕುರಿತು ಮಾತನಾಡುತ್ತಾ, ಕಾಲೇಜಿನ ಬಗ್ಗೆ ಹಾಗೂ ಪ್ರಾಂಶುಪಾಲರನ್ನು ನಿಂದಿಸಿರುವ ಆಡಿಯೋ ಒಂದು ವೈರಲ್​ ಆಗಿದೆ.

ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ ನಡೆಯುತ್ತಿದ್ದ ವೇಳೆ ಶಿಕ್ಷಕಿಯು “ನನಗೆ ಈ ಕಾಲೇಜಿನಲ್ಲಿ ಆಸಕ್ತಿ ಇಲ್ಲ. ನಾನು ರಾಜೀನಾಮೆ ಕೊಡುತ್ತಿದ್ದೇನೆ” ಎಂದು ಹೇಳುತ್ತಾರೆ. ಆಗ ವಿದ್ಯಾರ್ಥಿಯೊಬ್ಬ, ಬೇಡಂ ಮೇಡಂ ಎನ್ನುತ್ತಾನೆ. ಆಗ ಶಿಕ್ಷಕಿ, ನನಗೆ ಈ ಕಾಲೇಜಿನಲ್ಲಿ ಆಸಕ್ತಿ ಇಲ್ಲ, ಯಾವುದೇ ಸಮಸ್ಯೆಯನ್ನೂ ನಿವಾರಿಸುತ್ತಿಲ್ಲ ಎನ್ನುತ್ತಾರೆ.

ಕೂಡಲೇ ಮಧ್ಯೆ ಪ್ರವೇಶಿಸಿದ ಪ್ರಾಂಶುಪಾಲೆ, ಇದು ಆನ್​ಲೈನ್​ ಕ್ಲಾಸ್ ಆಗಿದ್ದು, ಈ ರೀತಿಯ ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಡಿ. ಕಾಲೇಜಿಗೆ ಬಂದು ಮಾತನಾಡಿ ಎನ್ನುತ್ತಾರೆ. ಆದರೆ ಉಪನ್ಯಾಸಕಿ ತೀವ್ರ ಆಕ್ರೋಶಗೊಂಡಿದ್ದು, ಪ್ರಾಂಶುಪಾಲೆಯ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ.

ನಾನು ರಾಜೀನಾಮೆ ನೀಡುತ್ತಿದ್ದೇನೆ. ಅದನ್ನು ಅಕ್ಸೆಪ್ಟ್​ ಮಾಡಿ, ಥೂ ಎಂಥ ಕಾಲೇಜಿಗೆ ಬಂದು ನಾನು ಸೇರಿಕೊಂಡೆ. ಒಂದು ಸಮಸ್ಯೆಯನ್ನೂ ಕೇಳುವುದಿಲ್ಲ, ಇಷ್ಟು ಕಡಿಮೆ ಸಂಬಳಕ್ಕೆ ಹೀಗೆ ಕೆಲಸ ಮಾಡಬೇಕು ಎಂದು ರೇಗಾಡುವುದನ್ನು ವಿಡಿಯೋದಲ್ಲಿ ಕೇಳಬಹುದು.

ಇಷ್ಟು ಕೆಲಸ ಮಾಡುವ ನನಗೆ 30 ಸಾವಿರ, ನಿಮಗೆ 80 ಸಾವಿರ. ಏನಿದು ಎಂದು ಶಿಕ್ಷಕಿ ಪ್ರಶ್ನಿಸಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಕೋವಿಡ್​ ಹಿನ್ನೆಲೆಯಲ್ಲಿ ಆನ್​ಲೈನ್​ ತರಗತಿಯ ವೇಳೆ ಬಹುಶಃ ಈ ಘಟನೆ ನಡೆದಂತೆ ಕಾಣಿಸುತ್ತಿದೆ.

https://www.youtube.com/watch?v=yBoinHHPzq4

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read