ಹಕ್ಕಿಯಂತೆ ನಮಗೆ ಹಾರಲು ಸಾಧ್ಯವಿಲ್ಲವಾದರಿಂದ, ಮೋಡಗಳಲ್ಲಿ ತೇಲುವ ಕನಸನ್ನು ನನಸಾಗಿಸುವವರೆಗೆ ಪ್ಯಾರಾಗ್ಲೈಡ್ ಮಾಡುವುದು ಉತ್ತಮವಾಗಿರುತ್ತದೆ.
ಪ್ಯಾರಾಗ್ಲೈಡಿಂಗ್ ನಲ್ಲಿ ಪ್ರಕೃತಿಯ ನಿಗೂಢ ಸೌಂದರ್ಯವನ್ನು ಅನುಭವಿಸುತ್ತಿರಲಿ ಅಥವಾ ನಗರದ ಎತ್ತರದ ಗಗನಚುಂಬಿ ಕಟ್ಟಡಗಳ ಮೇಲೆ ತೇಲುತ್ತಿರಲಿ, ನೀವು ಪ್ಯಾರಾಗ್ಲೈಡಿಂಗ್ ಅಭಿಮಾನಿಯಾಗಿದ್ದರೆ, ಐಸ್‌ಲ್ಯಾಂಡ್‌ನ ಈ ರಮಣೀಯ ಪಕ್ಷಿನೋಟವು ನಿಮ್ಮ ಹೃದಯವನ್ನು ಕಂಪಿಸುವಂತೆ ಮಾಡುತ್ತದೆ.
ಹಿತವಾದ ಸಂಗೀತದೊಂದಿಗೆ, ಅದ್ಭುತವಾದ ದೃಶ್ಯಾವಳಿಗಳು, ಹಸಿರು ಸೊಂಪಾದ ಕಣಿವೆಗಳನ್ನು ನೋಡಲು ಎರಡು ಕಣ್ಣು ಸಾಲದು. ಪ್ರಕೃತಿಯ ಸೌಂದರ್ಯವು ಅದ್ಭುತವಾದ ಜಲಪಾತದಿಂದ ಕಣ್ಮನ ಸೂರೆಗೊಳ್ಳುತ್ತದೆ.
ಅದ್ಭುತ ದೃಶ್ಯವು ಒಂದು ಕಾಲ್ಪನಿಕ ಕಥೆಯಂತೆ ಕಂಡರೂ, ಪ್ರಕೃತಿಯ ರಮಣೀಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಹೌದು, ಇದೀಗ ಟ್ವಿಟರ್ ನಲ್ಲಿ ಹಂಚಿಕೊಂಡ ವಿಡಿಯೋ ನೋಡಿದ್ರೆ ಪ್ರಕೃತಿ ರುದ್ರ ರಮಣೀಯ ಸೌಂದರ್ಯವನ್ನು ಎಷ್ಟು ಹೊಗಳಿದ್ರೂ ಸಾಲೋದಿಲ್ಲ. ರಮಣೀಯ ಬೆಟ್ಟ-ಗುಡ್ಡಗಳ ಸಾಲಿನ ಮಧ್ಯೆ ಹರಿಯುವ ಜಲಪಾತ ನೋಡಲು ಎಷ್ಟು ಚಂದ.
ಅಷ್ಟೇ ಅಲ್ಲ, ಇನ್ನೊಂದು ವಿಡಿಯೋದಲ್ಲಿ ಆಕಾಶದಲ್ಲಿ ಹಾರುತ್ತಿದ್ದ ರಣಹದ್ದು, ಪ್ಯಾರಾಗ್ಲೈಡರ್ ಇದ್ದ ಉಪಕರಣದ ಟೈಲ್ ಸ್ಟೀರಿಂಗ್‌ನಲ್ಲಿ ಕುಳಿತ್ತಿತ್ತು. ಮೊದಲು ಆಕಾಶದಲ್ಲಿ ತೇಲುತ್ತಿರುವಂತೆ ಅನಿಸುತ್ತಿದ್ದ ಹಕ್ಕಿಯು ನಿಧಾನಕ್ಕೆ ತನ್ನ ಕಾಲುಗಳನ್ನು ಪ್ಯಾರಾ ಗ್ಲೈಡರ್ ಬಳಿ ನಿಲ್ಲಿಸಿದ್ದು ವಿಶೇಷವಾಗಿ ಕಂಡಿತು. ಗ್ಲೈಡರ್‌ನ ಪಾದದ ಬಳಿ ಹಕ್ಕಿ ಕುಳಿತ ಕ್ಷಣ ಕ್ಯಾಮರಾದಲ್ಲಿ ಸೆರೆಯಾಯಿತು. ಈ ದೃಶ್ಯವು ನಂಬಲಸಾಧ್ಯವಾದರೂ ವಿಡಿಯೋ ಮಾತ್ರ ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಟ್ವಿಟರ್‌ನಲ್ಲಿ ಈ ವಿಡಿಯೋ ಸುಮಾರು 37 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.