ಹಿಮದಲ್ಲಿ ಆರೋಗ್ಯಕರ ಹುಲ್ಲನ್ನು ಹುಡುಕುತ್ತಿರುವ ಹಿಮಸಾರಂಗದ ಸಣ್ಣ ವಿಡಿಯೋ ವೈರಲ್ ಆಗಿದ್ದು, ಇದು ಬೆಚ್ಚಿ ಬೀಳಿಸುವುದು ಗ್ಯಾರೆಂಟಿ. ಹಿಮ ಸಾರಂಗ ನೋಡಲು ಸುಂದರವಾಗಿದ್ದರೂ ಬೆಚ್ಚಿ ಬೀಳಿಸುವುದು ಏಕೆ ಅಂತೀರಾ? ಹಾಗಿದ್ದರೆ ಈ ವಿಡಿಯೋ ನೋಡಬೇಕು.
ಈ ವಿಡಿಯೋ ನೋಡಿದಾಗ ಮೊದಲಿಗೆ ಏನು ಎಂದು ಅರ್ಥ ಆಗುವುದಿಲ್ಲ. ಎರಡೆರಡು ಜೊತೆ ಕೋಡುಗಳು ಇರುವಂತೆ ಕಾಣುತ್ತದೆ. ಆದರೆ ಅಸಲಿಗೆ ಆಗಿರುವುದೇ ಬೇರೆ.
ಇದು ಇನ್ನೊಂದು ಹಿಮ ಸಾರಂಗದ ಜೊತೆ ಜಗಳವಾಗಿ ಬಂದಿದೆ. ಸತ್ತುಹೋಗಿರುವ ಹಿಮಸಾರಂಗದ ಕೋಡು ಈ ಹಿಮಸಾರಂಗದ ಕೋಡಿಗೆ ಅಂಟಿಕೊಂಡಿದೆ. ಇದನ್ನು ನೋಡಿದರೆ ಇವೆರಡು ಅದೆಷ್ಟು ಭೀಕರವಾಗಿ ಜಗಳವಾಡಿರಬಹುದು ಎಂಬುದನ್ನು ಕಲ್ಪನೆ ಮಾಡಿಕೊಳ್ಳಬಹುದು.
“ಜಿಂಕೆಗಳು ಜಗಳವಾಡುತ್ತವೆ ಮತ್ತು ಯಾರು ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿದೆ……” ಎಂದು ಇದಕ್ಕೆ ಶೀರ್ಷಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಇದಾಗಲೇ 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
Deer gets into fight and it’s pretty clear who won… pic.twitter.com/oqyYRbGc1K
— Terrifying Nature (@JustTerrifying) February 24, 2023
This is deep.
Imagine killing your opp and being stuck carrying around their dead rotting head?
Who really won… 💭 https://t.co/xUGb9BOrQM— Jannifer Gao 🌶 (@Jani__Gee) February 26, 2023
Truly aspirational. To carry the heads of my enemies around as battle trophies, a silent “try me” https://t.co/NMnkRIoQJG
— TG (@tgwl5747) February 26, 2023