ತನ್ನ ಫನ್ನಿ ರೀಮಿಕ್ಸ್‌ಗಳಿಂದ ಖ್ಯಾತಿ ಪಡೆದಿರುವ ಯಶ್‌ರಾಜ್ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. 90 ರ ದಶಕದ ಬಾಲಿವುಡ್ ಹಾಡುಗಳಿಗೆ ರೀಮಿಕ್ಸ್ ಲೇಪ ಕೊಟ್ಟು ಹೊಸ ಕಂಟೆಂಟ್‌ನೊಂದಿಗೆ ಬಂದಿದ್ದಾರೆ ಯಶ್‌ರಾಜ್.
’ಏ ದಿಲ್ ಹೈ ಮುಶ್ಕಿಲ್’ ಚಿತ್ರದ ಬ್ರೇಕಪ್ ಹಾಡಿಗೆ ತಮ್ಮೆಲ್ಲಾ ಕ್ರಿಯಾಶೀಲತೆ ಧಾರೆಯೆರೆದು ಹೊಸ ಟಚ್ ಕೊಟ್ಟಿದ್ದಾರೆ ಯಶ್‌ರಾಜ್. ಈ ಬ್ರೇಕಪ್ ಹಾಡಿಗೆ ರಣಬೀರ್ ಕಪೂರ್ ಹಾಗೂ ಅನುಶ್ಕಾ ಶರ್ಮಾರನ್ನು ತೋರಿಸಿದ್ದು, 90 ರ ದಶಕದ ಸೆಟ್ಟಿಂಗ್‌ನಲ್ಲಿ ಮರುಸೃಷ್ಟಿಸಲಾಗಿದೆ. ಈ ಹಾಡನ್ನು ಅಸಲಿಗೆ ಅರಿಜಿತ್ ಸಿಂಗ್ ಹಾಗೂ ಜೋನಿತಾ ಗಾಂಧಿ ಹಾಡಿದ್ದರು.
90ರ ದಶಕದಲ್ಲೇನಾದರೂ ಬ್ರೇಕಪ್ ಹಾಡನ್ನು ಮಾಡಿದ್ದರೆ ಹೇಗಿರುತ್ತಿತ್ತು ಎಂದು ವಿವರಿಸುವ ಯಶ್‌ರಾಜ್, ಆ ಹಾಡಿಗೆ ಬೀಟ್ಸ್ ಹೇಗೆ ಕೊಡಬಹುದಿತ್ತು ಎಂದು ತೋರುತ್ತಾರೆ.
ನೆಟ್ಟಿಗರಿ ಭರಪೂರ ಮನರಂಜನೆ ಕೊಟ್ಟ ಈ ಹಾಡಿಗೆ ಕಾಮೆಂಟ್ಸ್‌ಗಳ ಸುರಿಮಳೆಯೇ ಆಗಿದೆ.
https://www.youtube.com/watch?v=C84aM4EBojE