ರಾಜಸ್ಥಾನದ ಪೊಲೀಸ್ ಒಬ್ಬರು ಹೆಲಿಕಾಫ್ಟರ್ ತುರ್ತು ಲ್ಯಾಂಡ್ ಆದ ವಿವರಗಳನ್ನು ಟಿ.ವಿ. ಪತ್ರಕರ್ತನಂತೆ ವರದಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ X (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹೆಲಿಕಾಫ್ಟರ್‌ನ ಪೈಲಟ್‌ನ್ನು ಮಾತನಾಡಿಸುವುದರ ಜೊತೆ ಜೊತೆ ತಮಗೆ ಸಾಧ್ಯವಿರುವ ಪ್ರತಿಯೊಂದು ಪ್ರಮುಖ ಮಾಹಿತಿಯನ್ನು ಒದಗಿಸಿದ್ದಾರೆ. ಹೆಲಿಕಾಫ್ಟರ್ ತುರ್ತು ಲ್ಯಾಂಡ್ ಆದ ಘಟನೆಯನ್ನು ವರದಿ ಮಾಡಿದ ಈ ಪೋಲೀಸ್‌ಗೆ ನೆಟ್ಟಿಗರು “ಹವ್ಯಾಸಿ ಪತ್ರಕರ್ತ” ಎಂದು ಕರೆದಿದ್ದಾರೆ.
“ಹೆಲಿಕಾಫ್ಟರ್ ಬೋಪಾಲ್‌ನಿಂದ ಟೇಕ್ ಆಫ್ ಆಗಿದ್ದು ಜೈಪುರ್‌ಗೆ ತೆರಳುತಿತ್ತು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ” ಎಂದು ಪೋಲೀಸ್ ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಹೆಲಿಕಾಫ್ಟರ್‌ನ ಪೈಲಟ್ ಜೊತೆ ಪೊಲೀಸ್ ಮಾತನಾಡಿದ್ದು ಈ ಸಂದರ್ಭ ಕ್ಯಾಪ್ಟನ್ ಹೆಸರು ಗೋಲಿ ಮತ್ತು ಕ್ಯಾಪ್ಟನ್ ಸಹಾಯಕನ ಹೆಸರ ಅಭಯ್ ಎಂದು ಗೊತ್ತಾಗಿದೆ.
ಹವಾಮಾನ ವೈಪರೀತ್ಯದ ಕಾರಣದಿಂದ ಹೆಲಿಕಾಪ್ಟರ್‌ನ ತುರ್ತು ಲ್ಯಾಂಡಿಂಗ್ ಮಾಡಿದಕ್ಕಾಗಿ ಪೋಲೀಸ್ ಪೈಲಟ್‌ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿಪ್ಸಾನ್ ಕಂಪನಿಗೆ ಸೇರಿದ ಖಾಸಗಿ ಹೆಲಿಕಾಫ್ಟರ್ ಇದಾಗಿದ್ದು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ರಾಜಸ್ಥಾನದ ಬರಾನ್ ಪ್ರದೇಶದಲ್ಲಿ ಈ ಹೆಲಿಕಾಫ್ಟರ್ ಇಳಿಯಲು ವ್ಯವಸ್ಥೆ ಮಾಡಲಾಯಿತು ಎಂದು ವರದಿಯಾಗಿದೆ.
https://twitter.com/i/status/1701641757921010104