
ಪ್ರಾಣಿಗಳು ಮತ್ತು ಮನುಷ್ಯರ ಸಂಬಂಧ ಅನೂಹ್ಯವಾದದ್ದು. ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೋತಿಗಳ ಗುಂಪು ಮಗುವನ್ನು ಸುತ್ತುವರೆದು ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋ ಜನರ ಮನಸ್ಸನ್ನು ಗೆದ್ದಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ದೇವಸ್ಥಾನದ ನೆಲದ ಮೇಲೆ ಕುಳಿತಿರುವುದನ್ನು ನೋಡಬಹುದು. ಮಗುವು ದೇವಾಲಯದ ಅಂಗಳದಲ್ಲಿ ಕುಳಿತಿರುವಾಗ ಕೆಲವು ಕೋತಿಗಳು ಒಂದೊಂದಾಗಿ ಅವನನ್ನು ಸುತ್ತುವರಿಯಲು ಪ್ರಾರಂಭಿಸುತ್ತವೆ.
ಕೆಲವು ಮಂಗಗಳು ಮಗುವನ್ನು ಮುಟ್ಟಲು ಕೈ ಚಾಚಿದರೆ, ಇನ್ನು ಕೆಲವು ಮಗುವಿನ ಕೈಯನ್ನು ತಮಾಷೆಯಾಗಿ ಹಿಡಿದುಕೊಳ್ಳುತ್ತವೆ. ಕೆಲವು ಚೇಷ್ಟೆಯ ಕೋತಿಗಳು ಮಗುವನ್ನು ಹಿಡಿದು ಅದರ ತಲೆಯ ಮೇಲೆ ಮುತ್ತು ಕೊಡುತ್ತವೆ.
ಮಗುವು ಮಂಗಗಳನ್ನು ನೋಡುವಾಗ ಭಯ ಅಥವಾ ಆತಂಕದ ಲಕ್ಷಣಗಳನ್ನು ತೋರಿಸುವುದಿಲ್ಲ, ಬದಲಿಗೆ ಅವುಗಳನ್ನು ಮುದ್ದಿಸುತ್ತದೆ. ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.