ಓಕ್ಲಹೋಮಾ: ಅಮೆರಿಕದ ಓಕ್ಲಹೋಮಾ ಆಕಾಶದಲ್ಲಿ ಉಲ್ಕೆ ಬೀಳುವಂತೆ ತೋರುವ ಆಕಾಶ ಬೆಳಕಿನ ಚೆಂಡನ್ನು ಕ್ಯಾಮೆರಾ ಸೆರೆಹಿಡಿದಿವೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ದೃಶ್ಯಾವಳಿಗಳು ಆಕಾಶದಾದ್ಯಂತ ಬೆಳಕಿನ ಕಿರಣಗಳನ್ನು ನೋಡಬಹುದು.
ಫಾಕ್ಸ್ 23 ಹವಾಮಾನ ಶಾಸ್ತ್ರಜ್ಞರಾದ ಲಾರಾ ಮಾಕ್ ಅವರು ಟ್ವಿಟ್ಟರ್‌ನಲ್ಲಿ ಡ್ಯಾಶ್‌ಕ್ಯಾಮ್ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ಆಕಾಶದಲ್ಲಿ ಚಲಿಸುವಾಗ ಪ್ರಕಾಶಮಾನವಾದ ಹಸಿರು ಉರಿಯನ್ನು ಕ್ಯಾಮೆರಾ ಸೆರೆ ಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯು ಸಂಪೂರ್ಣವಾಗಿ ಡೋರ್‌ಬೆಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ. ಇದು ಪ್ರಪಂಚದಾದ್ಯಂತ ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ. ಇದನ್ನು ನೋಡಿದ ನೀವೆ ಧನ್ಯರು ಎಂದು ಹಲವರು ಹೇಳಿಕೊಂಡಿದ್ದಾರೆ. ಈ ಅದ್ಭುತ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಇಂಥ ಹಲವಾರು ಅದ್ಭುತಗಳು ಆಕಾಶದಲ್ಲಿ ನಡೆಯುತ್ತಲೇ ಇರುತ್ತವೆ. ಅವುಗಳ ಹೆಚ್ಚಿನ ಅಧ್ಯಯನ ಅಗತ್ಯ ಎಂದಿದ್ದಾರೆ.