ಇತಿಹಾಸದಲ್ಲೇ ಮೊದಲ ಬಾರಿಗೆ ವಾಷಿಂಗ್ಟನ್ನಲ್ಲಿ ಪ್ರತ್ಯಕ್ಷವಾದ ಅಪರೂಪದ ಫ್ಲೆಮಿಂಗೋಗಳು….! 25-09-2023 10:53AM IST / No Comments / Posted In: Featured News, Live News, International ವಿಸ್ಕಾನ್ಸಿನ್ ಪೋರ್ಟ್ ವಾಷಿಂಗ್ಟನ್ನಲ್ಲಿ ಅನಿರೀಕ್ಷಿತವಾಗಿ ಐದು ಫ್ಲೆಮಿಂಗೋಗಳು ಕಾಣಿಸಿಕೊಂಡಿವೆ. ಇವು ಮಿಲ್ವಾಕೀಯಿಂದ ಉತ್ತರಕ್ಕೆ 25 ಮೈಲಿಗಳಷ್ಟು ದೂರದಲ್ಲಿದೆ. ಮಿಚಿಗನ್ ಸರೋವರದ ತೀರದಲ್ಲಿ ಐದು ಫ್ಲೆಮಿಂಗೋಗಳು ಅಲೆದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದೇ ಮೊಟ್ಟ ಮೊದಲ ಬಾರಿಗೆ ಅಮೆರಿಕ ಫ್ಲೆಮಿಂಗೋಗಳು ವಿಸ್ಕಾನ್ಸಿನ್ನಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ಶುಕ್ರವಾರದಂದು ಐದು ಫ್ಲೆಮಿಂಗೋಗಳು ಕಾಣಿಸಿಕೊಂಡಿವೆ. ಉಷ್ಣವಲಯದಲ್ಲಿ ಕಾಣಸಿಗುವ ಈ ಪಕ್ಷಿಗಳು ತಮ್ಮ ಸಾಮಾನ್ಯ ಆವಾಸ ಸ್ಥಾನದಿಂದ ದೂರದಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಮೂರು ಫ್ಲೆಮಿಂಗೋಗಳು ವಯಸ್ಕ ಪಕ್ಷಿಗಳಾಗಿವೆ. ಇವುಗಳು ಗುಲಾಬಿ ಬಣ್ಣದ ಗರಿಗಳನ್ನು ಹೊಂದಿವೆ. ಉಳಿದ ಎರಡು ಪಕ್ಷಿಗಳು ಬಾಲ್ಯಾವಸ್ಥೆಯಲ್ಲಿದ್ದು ಬೂದು ಬಣ್ಣದ ಗರಿಯನ್ನು ಹೊಂದಿವೆ. ಈ ಪಕ್ಷಿಗಳು ಈ ರೀತಿ ಕಾಣಿಸಿಕೊಂಡಿರೋದು ನಿಜಕ್ಕೂ ನಂಬಲಾರದ ವಿಚಾರ ಎಂದು ಪಕ್ಷಿ ವೀಕ್ಷಕ ಹಾಗೂ ಫೋಟೋಗ್ರಾಫರ್ ಜಿಮ್ ಎಡೆಲ್ಹುಬರ್ ಹೇಳಿದ್ದಾರೆ. ಇದರ ಜೊತೆಯಲ್ಲಿ ಫ್ಲೆಮಿಂಗೋಗಳು ಇಂಡಿಯಾನಾ, ಕೆಂಟುಕಿ, ಓಹಿಯೋ ಹಾಗೂ ಪೆನ್ಸಿಲ್ವೇನಿಯಾದಲ್ಲಿ ಸಹ ಕಾಣಿಸಿಕೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. No, this isn't a beach in Florida – this is WISCONSIN! 🦩 For the first time in nearly a century, a flamboyance of flamingos was spotted yesterday on the Wisconsin side of Lake Michigan following Hurricane Idalia. pic.twitter.com/iRcdNzH4FU — AccuWeather (@accuweather) September 23, 2023