ಹಗ್ಗದ ಮೇಲೆ ವೃದ್ಧೆಯ ಸೈಕ್ಲಿಂಗ್: ವಿಡಿಯೋ ​ನೋಡಿ ನಿಬ್ಬೆರಗಾದ ನೆಟ್ಟಿಗರು…!

ರಾಕ್ ಕ್ಲೈಂಬಿಂಗ್, ರೋಪ್ ಸೈಕ್ಲಿಂಗ್, ಪ್ಯಾರಾಗ್ಲೈಡಿಂಗ್, ಸ್ಕೈ ಡೈವಿಂಗ್‌ನಂತಹ ಸಾಹಸಗಳು ನಮ್ಮಲ್ಲಿ ಹೆಚ್ಚಿನವರಿಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ. ಇಂಥ ಸಾಹಸ ಮಾಡಲು ವಯಸ್ಸಿನ ಮಿತಿ ಏನಿಲ್ಲ. ವಯಸ್ಸು ಎನ್ನುವುದು ದೇಹಕ್ಕೇ ಹೊರತು ಮನಸ್ಸಿಗೆ ಅಲ್ಲ. ಇದನ್ನು ಸಾಬೀತು ಮಾಡುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ವಯಸ್ಸಾದ ಮಹಿಳೆಯೊಬ್ಬರು ರೋಪ್ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ನೋಡುಗರನ್ನು ನಿಬ್ಬೆರಗಾಗಿಸುತ್ತದೆ. ಅತಿ ಎತ್ತರದಲ್ಲಿ ಕಟ್ಟಿದ ಹಗ್ಗದ ಮೇಲೆ ಮಹಿಳೆ ಸೈಕ್ಲಿಂಗ್​ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್‌ಸ್ಟಾಗ್ರಾಮ್ ಬಳಕೆದಾರರಾದ ಶೈನು (@yathrikan_200) ಎನ್ನುವವರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸೀರೆಯನ್ನು ಧರಿಸಿರುವ ವಯಸ್ಸಾದ ಮಹಿಳೆ, ರೋಪ್ ಸೈಕಲ್ ಸವಾರಿ ಮಾಡುವುದುನ್ನು ನೋಡಬಹುದಾಗಿದೆ. ಈ ಸಾಹಸವನ್ನು ಸಲೀಸಾಗಿ ಮಾಡುವುದನ್ನು ನೋಡಿ ಎಂಥವರೂ ಹುಬ್ಬೇರಿಸುವಂತಿದೆ. ಈಕೆಗೆ 67 ವರ್ಷ ವಯಸ್ಸಾಗಿರುವುದಾಗಿ ಶೀರ್ಷಿಕೆಯಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read