ಪ್ರೇಮ ವಿವಾಹದ ಪಯಣವನ್ನ ಮೆಹೆಂದಿಯಲ್ಲಿ ಬರೆಸಿಕೊಂಡ ವಧುವಿನ ಐಡಿಯಾಗೆ ನೆಟ್ಟಿಗರ ಶ್ಲಾಘನೆ

ಮದುವೆ ಸಂಭ್ರಮಾಚರಣೆ ವೇಳೆ ವಧು ತನ್ನ ಕೈಮೇಲೆ ಹಾಕಿಸಿಕೊಂಡಿರುವ ಮೆಹೆಂದಿ ಆಕೆಯ ಪ್ರೇಮ ವಿವಾಹದ ಪಯಣವನ್ನ ಹೇಳುತ್ತಿದೆ. ಎಡಗೈನ ಅಂಗೈನಲ್ಲಿ ಆಕೆ ತನ್ನ ಸಂಗಾತಿಯೊಂದಿಗಿನ ಪರಿಚಯ, ಪ್ರೇಮ ನಿವೇದನೆ, ಮೊದಲ ಭೇಟಿ, ನಂತರ ಮದುವೆ ನಡೆಯುತ್ತಿರುವ ದಿನಾಂಕವನ್ನ ಮೆಹೆಂದಿಯಲ್ಲಿ ಕೈ ಮೇಲೆ ಬರೆಸಿಕೊಂಡಿದ್ದಾರೆ.

ಇದು ನೆಟ್ಟಿಗರ ಹೃದಯ ಗೆದ್ದಿದೆ. ಹಂಚಿಕೊಂಡಿರುವ ವಿಡಿಯೋದಲ್ಲಿ ಡಿಸೆಂಬರ್ 5, 2021 ರಂದು ಇನ್ ಸ್ಟಾಗ್ರಾಂ ಎಂದು ಬರೆಯಲಾಗಿದೆ. ಈ ಮೂಲಕ ಇಬ್ಬರೂ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿರೋದು ಎಂಬುದು ಗೊತ್ತಾಗಿದೆ.

ಜನವರಿ 19, 2022 ಪ್ರಪೋಸ್ ಮಾಡಿದ ದಿನ ಎಂದು ಸೂಚಿಸಿದೆ. ಮೂರನೇ ದಿನಾಂಕವು ಏಪ್ರಿಲ್ 25, 2022 ಆಗಿದ್ದು, ಆ ದಿನದಂದು ವಧು ಮತ್ತು ವರರು ಮೊದಲ ಬಾರಿಗೆ ಭೇಟಿಯಾದರು ಎಂದು ಸೂಚಿಸುವ ಫಸ್ಟ್ ಮೀಟ್ ಎಂದು ಬರೆಯಲಾಗಿದೆ. ಇಬ್ಬರೂ ಈ ವರ್ಷ ಜನವರಿ 31 ರಂದು ಮದುವೆಯಾಗುತ್ತಿರುವುದಾಗಿ ಕೊನೆಯ ದಿನಾಂಕ ಹೇಳಿದೆ.

ಈ ವಿಡಿಯೋ ವೈರಲ್ ಆಗಿದ್ದು 1.97 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಧುವಿನ ಈ ವಿಭಿನ್ನ ನಡೆ ವೀಕ್ಷಕರಿಗೆ ಇದು ಪ್ರೇಮ ವಿವಾಹ ಎಂದು ಸ್ಪಷ್ಟಪಡಿಸಿದ್ದು ಜನ ಕಾಮೆಂಟ್‌ಗಳಲ್ಲಿ ವಧುವನ್ನು ಶ್ಲಾಘಿಸಿದ್ದಾರೆ.

https://youtu.be/rwRpo6B5mU8

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read