ಡಿಜಿಟಲೀಕರಣದ ಜಗತ್ತಿನಲ್ಲಿ, ಅನಿರೀಕ್ಷಿತವಾಗಿ ಏನಾದರೂ ನಡೆದರೆ ಕೂಡಲೇ ಅದು ತಾಂತ್ರಿಕ ದೋಷವಾಗಿತ್ತು ಎಂದು ಬಿಡುವುದು ಸಹಜ. ಅಂಥದ್ದೇ ಒಂದು ಪೇಚಾಟದ ವಿಡಿಯೋ ವೈರಲ್ ಆಗಿದೆ. ಬಿಬಿಸಿ ಪತ್ರಕರ್ತೆಯೊಬ್ಬರು ಲೈವ್ನಲ್ಲಿ ಇರುವಾಗ ಆಗಿರುವ ಮುಜುಗರದ ವಿಡಿಯೋ ಇದಾಗಿದೆ.
ವಿಕ್ಟೋರಿಯಾ ವ್ಯಾಲೆಂಟೈನ್ ಎಂಬ ಬಿಬಿಸಿ ಪತ್ರಕರ್ತೆಯು ಸುದ್ದಿ ಹೇಳಲು ಬಂದಾಗ ಆಕೆ ಎಲ್ಲಿ ಕುಳಿತುಕೊಳ್ಳಬೇಕಾಗಿತ್ತೋ ಅಲ್ಲಿ ಕ್ಯಾಮೆರಾ ಹೋಗಲಿಲ್ಲ. ಬದಲಿಗೆ ಕ್ಯಾಮೆರಾ ಕೋಣೆಯ ಇನ್ನೊಂದು ಕಡೆಗೆ ಹೋಯಿತು. ಕ್ಯಾಮೆರಾ ಹೋದಲ್ಲಿ ಪತ್ರಕರ್ತೆಯೂ ಹೋದಳು.
ನಂತರ ವಿಚಿಲಿತರಾಗದ ಆಕೆ, ಒಮ್ಮೊಮ್ಮೆ ಹೀಗೆ ಆಗುವುದುಂಟು ಎಂದು ಪರಿಸ್ಥಿತಿಯನ್ನು ನಿಭಾಯಿಸಿ ನಂತರ ತಾನು ಕುಳಿತುಕೊಳ್ಳುವ ಜಾಗದಲ್ಲಿಲ ಹೋಗಿ ಕುಳಿತುಕೊಂಡಳು. ಕ್ಯಾಮೆರಾದ ಹಿಂದೆ ಆಕೆ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ವ್ಯಾಲೆಂಟೈನ್ ಇದನ್ನು ಖುದ್ದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆಕೆಯ ಚುರುಕುತನ ನೋಡಿ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
https://twitter.com/VValentineNews/status/1616352559626702850?ref_src=twsrc%5Etfw%7Ctwcamp%5Etweetembed%7Ctwterm%5E1616352559626702850%7Ctwgr%5E4d4a1d1404b76854a483fb3733daa9bb8528c38a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-bbc-journalist-chases-camera-as-it-runs-out-of-frame-during-the-live-show