ಮೂರು ಮಂಗಗಳು ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ವೈರಲ್​

ಮೂರು ಮಂಗಗಳು ಕೊಳದಲ್ಲಿ ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ. ಈ ತಿಂಗಳ ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದ್ದು, ಇದೀಗ ಜನರನ್ನು ರಂಜಿಸುತ್ತಿದೆ. ಮೂಡ್​ ಆಫ್​ ಆದಾಗ ಇದು ತುಂಬಾ ಖುಷಿ ಕೊಡುತ್ತದೆ ಎನ್ನುವ ಕಾರಣಕ್ಕೆ ಹಲವರು ಇದನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮೂರು ಮಂಗಗಳನ್ನು ನೋಡಬಹುದು. ಸಾಮಾನ್ಯವಾಗಿ ಮೂರು ಮಂಗಗಳು ಎಂದಾಗ ನಮ್ಮ ಕಣ್ಣ ಮುಂದೆ ಕೆಟ್ಟದ್ದನ್ನು ಮಾತನಾಡಬೇಡ, ಕೇಳಬೇಡ, ನೋಡಬೇಡ ಎನ್ನುವ ಮಂಗಗಳು ಕಾಣಿಸುತ್ತವೆ. ಆದರೆ ಈ ವಿಡಿಯೋದಲ್ಲಿ ಕಾಣಸಿಗುವ ಮೂರು ಮಂಗಗಳು ಶಾಂತವಾಗಿ ನೀರಿನಲ್ಲಿ ಕುಳಿತುಕೊಂಡು ನಿದ್ದೆಗೆ ಜಾರಿವೆ.

ಇದನ್ನು ನೋಡಿದರೆ ಮನುಷ್ಯನಿಗೂ ಇದಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂಬಂತೆ ತೋರುತ್ತದೆ. ವಿಶೇಷವಾಗಿ ಮಂಗಗಳ ವಿಡಿಯೋಗಳನ್ನು ಹಂಚಿಕೊಳ್ಳುವ ಪುಟದಿಂದ ತುಣುಕನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. “ಬಾತ್ ಟೈಮ್” ಎಂದು ಇದಕ್ಕೆ ಶೀರ್ಷಿಕೆ ಕೊಡಲಾಗಿದೆ. ಇದಾಗಲೇ ವಿಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

https://youtu.be/Qrk7aNHDfLs

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read