ಆಲಿವ್ ರಿಡ್ಲಿ ಜಾತಿಯ ಆಮೆಗಳು ಸಾಮೂಹಿಕವಾಗಿ ಮೊಟ್ಟೆಯಿಡಲು ಒಡಿಶಾದ ರುಶಿಕುಲ್ಯ ಕಡಲತೀರದಲ್ಲಿ ಬಂದು ಸೇರುವ ಸಮಯವಿದು. ಈ ಆಮೆಗಳ ವೈಶಿಷ್ಟ್ಯವೇನೆಂದರೆ ಇವು ಹಗಲು ಹೊತ್ತಿನಲ್ಲಿ ಕಡಲತೀರದಲ್ಲಿ ಮೊಟ್ಟೆಗಳನ್ನು ಇಡುತ್ತವೆ.
ಈ ಜಾತಿಯ ನೂರಾರು ಆಮೆಗಳು ಸಮುದ್ರದ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಅವುಗಳನ್ನು ಮರಳಿನಲ್ಲಿ ಹೂತುಹಾಕುವ ಪ್ರಕ್ರಿಯೆ ನಡೆಸುತ್ತವೆ. ನಂತರ ಅಲ್ಲಿಯೇ ಮರಿಗಳು ಹೊರಬರುತ್ತವೆ. ಪ್ರತಿ ಗೂಡಿನಿಂದ ಸರಾಸರಿ 80 ರಿಂದ 100 ಆಮೆಗಳು ಹೊರಬರುತ್ತವೆ,
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ್ ನಂದಾ ಅವರು ಆಲಿವ್ ರಿಡ್ಲಿ ಆಮೆಗಳ ವಿಡಿಯೋ ಶೇರ್ ಮಾಡಿದ್ದಾರೆ. ಒಡಿಶಾ ತನ್ನ ವಾರ್ಷಿಕ ಅತಿಥಿಯನ್ನು ಸ್ವಾಗತಿಸುತ್ತಿದೆ. ಆಲಿವ್ ರಿಡ್ಲಿ ಆಮೆಗಳ ಸಾಮೂಹಿಕ ಗೂಡುಕಟ್ಟುವಿಕೆ ಆರಂಭವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ಕುತೂಹಲಭರಿತವಾಗಿರುವ ವಿಡಿಯೋ ಆಗಿದೆ.