WATCH: ಮದುವೆ ಮುನ್ನಾ ದಿನ ಆಸ್ಪತ್ರೆ ಸೇರಿದ ವಧು; ಮಂಟಪವಾಯ್ತು ಶಸ್ತ್ರ ಚಿಕಿತ್ಸಾ ಕೊಠಡಿ

ತಮ್ಮ ಜೀವನ ಸಂಗಾತಿಯಾಗುವವರು ಕಷ್ಟ-ಸುಖ ಎರಡರಲ್ಲೂ ತಮ್ಮ ಜೊತೆಯಲ್ಲಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇಲ್ಲೊಬ್ಬಳು ಹುಡುಗಿಗೆ ಅಂಥದೇ ಹುಡುಗ ‘ವರ’ನಾಗಿ ಸಿಕ್ಕಿದ್ದಾನೆ.

ತೆಲಂಗಾಣದ ಒಬ್ಬ ವಧು ಮದುವೆಗೆ ಒಂದು ದಿನ ಮೊದಲೇ ಚಿಕ್ಕದೊಂದು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆ ಸೇರಿದಳು. ಅವಳು ದಾಖಲಾಗಿದ್ದ ಆಸ್ಪತ್ರೆಯ ವಾರ್ಡ್ ಮದುವೆ ಮಂಟಪವಾಗಿ ಮಾರ್ಪಾಡಾಯಿತು. ಈ ವಿಚಿತ್ರ ಸನ್ನಿವೇಶ ಸುಖಾಂತ್ಯದಲ್ಲಿ ಬದಲಾಗಿದ್ದು ಹೇಗೆ ಗೊತ್ತಾ?

ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ‘ತಿರುಪತಿ’ ಎಂಬ ಹೆಸರಿನ ಯುವಕ, ತನ್ನ ಭಾವೀ ಪತ್ನಿ ಮದುವೆಗೆ ಕೇವಲ ಒಂದು ದಿನದ ಮೊದಲು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಳೆ ಎಂಬ ವಿಷಯ ತಿಳಿದ ಮೇಲೂ ಮದುವೆಯ ನಿರ್ಧಾರ ಬದಲಿಸಲಿಲ್ಲ.

ತನ್ನ ಕುಟುಂಬದವರು, ಹತ್ತಿರದ ಸಂಬಂಧಿಕರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಮ್ಮುಖದಲ್ಲಿ ಆತ ಲಂಬಾಡಿಪಲ್ಲಿ ಹಳ್ಳಿಯ ‘ ಶೈಲಜಾ ‘ಎಂಬ ಹುಡುಗಿಯನ್ನ ಆಕೆ ಆಸ್ಪತ್ರೆಯ ಹಾಸಿಗೆ ಮೇಲಿದ್ದಾಗಲೇ ಮದುವೆಯಾಗಿದ್ದಾನೆ.

ಶೈಲಜಾ ಮತ್ತು ತಿರುಪತಿಯ ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಂಧು ಬಳಗದ ಎದುರಲ್ಲಿ ಮದುವೆಯ ಬಹುತೇಕ ಶಾಸ್ತ್ರಗಳನ್ನು ನಡೆಸಿರುವುದು ಕಂಡು ಬರುತ್ತದೆ.

ಒಂದು ವರದಿಯ ಪ್ರಕಾರ, ಈ ಮದುವೆ ನಡೆದ ಮಂಚೀರಿಯಲ್ ಭಾಗದ ಆಸ್ಪತ್ರೆಯು ತಮ್ಮ ಆವರಣದಲ್ಲಿ ಮದುವೆ ನಡೆಸಲು ಅನುಮತಿ ಕೊಟ್ಟಿದ್ದಲ್ಲದೆ, ಮದುವೆ ಸಾಂಗವಾಗಿ ನೆರವೇರಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿದ್ದರಂತೆ. ಶಸ್ತ್ರಚಿಕಿತ್ಸೆ ಮತ್ತು ನಂತರದ ವಧುವಿನ ಆರೋಗ್ಯದ ಸ್ಥಿತಿ-ಗತಿಯ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read