
ಮದುವೆಯ ದಿನವೇ ಮದುಮಗಳ ಡ್ರೆಸ್ನಲ್ಲಿ ಯುವತಿಯೊಬ್ಬರು ವೈದ್ಯಕೀಯ ಪರೀಕ್ಷೆ ಬರೆದು ಬಂದಿರುವ ವಿಡಿಯೋ ವೈರಲ್ ಆಗಿದೆ.
ಶ್ರೀಲಕ್ಷ್ಮಿ ಅನಿಲ್ ಅವರ ಪ್ರಾಯೋಗಿಕ ಪರೀಕ್ಷೆಯು ಅವರ ಮದುವೆಯ ದಿನವೇ ಇತ್ತು. ಆದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆದು ನಂತರ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.
ವಧುವಿನ ಉಡುಪಿನಲ್ಲಿ ಬಿಳಿ ಲ್ಯಾಬ್ ಕೋಟ್ ಮತ್ತು ಸ್ಟೆತಾಸ್ಕೋಪ್ನಿಂದ ಮದುಮಗಳು ಅಲಂಕರಿಸಲ್ಪಟ್ಟಿದ್ದರು. ಇದಕ್ಕೆ ಇಂಟರ್ನೆಟ್ ಬಳಕೆದಾರರಿಂದ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.
ʼಹ್ಯೂಮನ್ಸ್ ಆಫ್ ಬಾಂಬೆʼ ಕೇರಳದ ಈ ಸ್ಫೂರ್ತಿದಾಯಕ ಯುವತಿಯ ಕಥೆ ಹಂಚಿಕೊಂಡಿದ್ದಾರೆ. “ನಾನು 8 ವರ್ಷದವಳಾಗಿದ್ದಾಗಿನಿಂದ ವೈದ್ಯೆಯಾಗಬೇಕೆಂಬ ಕನಸು ಕಂಡೆ – ಒಂದು ದಿನ, ಅಮ್ಮ ತುಂಬಾ ಅನಾರೋಗ್ಯಕ್ಕೆ ಒಳಗಾದರು, ನಾವು ಅವಳನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ನಾನು ಅಲ್ಲಿ ದಿನಗಳನ್ನು ಕಳೆದೆ.
ಕಾರಿಡಾರ್‌ನಲ್ಲಿರುವ ಬೆಂಚುಗಳ ಮೇಲೆ ಕುಳಿತಾಗ, ಈ ಜನರು ಬಿಳಿ ಕೋಟ್ ಧರಿಸಿ ಕುತ್ತಿಗೆಗೆ ಏನನ್ನಾದರೂ ನೇತುಹಾಕಿರುವುದನ್ನು ನಾನು ಗಮನಿಸಿದೆ. ಆಗಲೇ ನಾನೂ ಹೀಗೆ ಆಗಬೇಕು ಎಂದು ಕನಸು ಕಂಡಿದ್ದೆ” ಎಂದು ಶ್ರೀಲಕ್ಷ್ಮಿ ಹೇಳಿದ್ದಾರೆ.
ಮುಂದಿನ 10 ವರ್ಷಗಳ ಕಾಲ, ನಾನು ಹಗಲು – ರಾತ್ರಿ ಕೆಲಸ ಮಾಡಿದೆ. ಆದರೆ ಮದುವೆಯ ದಿನ ಮತ್ತು ಪರೀಕ್ಷೆ ಒಂದೇ ದಿನದಲ್ಲಿ ಬೀಳುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ, ಒಂದೇ ದಿನ ಬಂದಾಗ ಗಂಡಿನ ಮನೆಯವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡೆ ಎಂದಿದ್ದಾರೆ.
