ಕೇರಳೀಯಂ 2023ರಲ್ಲಿ ಈ ಮೂವರು ಮಹಾನ್ ನಟರು ಭಾಗಿ; ಬಿಳಿ ಶರ್ಟ್, ಧೋತಿ ಧರಿಸಿ ಮಿಂಚಿದ ಕಲಾವಿದರು….!

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವೆಂಬರ್ 1 ರಂದು ಕೇರಳೀಯಂ 2023ರ ಆರಂಭವನ್ನು ಘೋಷಿಸಿದ್ರು. ಇದನ್ನು ಮಲಯಾಳಿಗಳ ಹಬ್ಬ ಎಂದೂ ಕರೆಯಲಾಗುತ್ತದೆ. ಈ ಉತ್ಸವವು ನವೆಂಬರ್ 1 ರಿಂದ ನವೆಂಬರ್ 7 ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆಯಲಿದೆ.

ವಿಶೇಷವೆಂದ್ರೆ ಕಾರ್ಯಕ್ರಮದಲ್ಲಿ ನಟರಾದ ಮೋಹನ್‌ಲಾಲ್, ಮಮ್ಮುಟ್ಟಿ ಮತ್ತು ಕಮಲ್ ಹಾಸನ್ ಅವರು ಕೇರಳೀಯಂ 2023ರ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದಾರೆ.

ಕಮಲ್ ಹಾಸನ್, ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಅವರು ಕೇರಳೀಯಂ 2023 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟ ಕೆಲವು ಸೆಲೆಬ್ರಿಟಿಗಳಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಈ ಮೂವರು ಸೆಲೆಬ್ರಿಟಿಗಳ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕಮಲ್ ಹಾಸನ್, ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಬಿಳಿ ಶರ್ಟ್ ಮತ್ತು ಧೋತಿಯನ್ನು ಧರಿಸಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.

ಇನ್ನು ಭಾತೃತ್ವ ಮತ್ತು ಪ್ರೀತಿಯ ಸಂಸ್ಕೃತಿಯನ್ನು ಆಚರಿಸಲು ಕೇರಳೀಯಂ 2023 ಒಂದು ಅವಕಾಶವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು. ಉದ್ಘಾಟನಾ ಸಮಾರಂಭದಲ್ಲಿ ಮೂವರು ನಟರು ಮಾತ್ರವಲ್ಲದೆ, ಶೋಭನಾ, ಮಂಜು ವಾರಿಯರ್ ಸೇರಿದಂತೆ ಅನೇಕ ತಾರೆಯರು ಮತ್ತು ಇತರ ದೇಶಗಳ ಕೈಗಾರಿಕೋದ್ಯಮಿಗಳು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read