alex Certify ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಮಕ್ಕಳ ಆರೈಕೆ ವಿಚಾರದಲ್ಲಿ ಹೆತ್ತವರು ಯಾವಾಗಲೂ ತಮ್ಮ ಮೊದಲ ಆದ್ಯತೆ ಕೊಡುತ್ತಲೇ ಬರುತ್ತಾರೆ. ಮೊದಲ ಹೆಜ್ಜೆ ಇಡಲು ನೆರವಾಗುವುದರಿಂದ ಹಿಡಿದು ಶಿಕ್ಷಣ ಕೊಡಿಸಿ, ಕೆಲಸ ಹಿಡಿಯುವವರೆಗೂ ಹೆತ್ತವರು ಮಕ್ಕಳಿಗೆ ಕೈಲಾದದ್ದನ್ನೆಲ್ಲಾ ಮಾಡುತ್ತಲೇ ಬರುತ್ತಾರೆ.

ಆದರೆ ಕೆಲವೊಮ್ಮೆ ತಮ್ಮ ಮಕ್ಕಳ ಕುರಿತಂತೆ ತೀವ್ರವಾದ ಅಸುರಕ್ಷಿತ ಭಾವ ಮೂಡಿದಲ್ಲಿ ಹೆತ್ತವರು ಕೆಲವೊಮ್ಮೆ ಅತಿಯಾದ ರಕ್ಷಣೆಗೆ ಮುಂದಾಗುತ್ತಾರೆ. ಇದರಿಂದ ಮಕ್ಕಳಿಗೆ ಕೊಂಚ ಕಿರಿಕಿರಿ ಆಗುವುದು ಸತ್ಯ.

ಸಾಮಾನ್ಯವಾಗಿ ಮಕ್ಕಳಿಗೆ ದೃಷ್ಟಿ ಬೀಳದಿರಲಿ ಎಂದು ದೃಷ್ಟಿ ಬೊಟ್ಟು ಇಡುವುದು ವಾಡಿಕೆ. ಆದರೆ ಇಲ್ಲೊಂದು ಪುಟಾಣಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುನ್ನ ಅದಕ್ಕೆ ವಿಪರೀತ ಎನಿಸುವಷ್ಟು ಕಾಜಲ್ ಹಾಕಿರುವುದು ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ.

ಕಣ್ಣಿನ ಹುಬ್ಬುಗಳು, ಕೆನ್ನೆ, ಹಣೆ ತುಂಬೆಲ್ಲಾ ಕಾಜಲ್ ಇರುವುದನ್ನು ಕಂಡ ನೆಟ್ಟಿಗರು, “ಈ ಮಟ್ಟದಲ್ಲಿ ಕಾಜಲ್ ಹಾಕುವುದು ಮಗುವಿನ ಎಳೆಯ ಚರ್ಮದ ಮೇಲೆ ಪರಿಣಾಮ ಬೀರುತ್ತದೆ, ಅದಕ್ಕೆ ಚರ್ಮ ಉರಿಯಲೂಬಹುದು,” ಎಂದು ಮಗುವಿನ ಬಗ್ಗೆ ಕಾಳಜಿ ತೋರಿ ಮಾತನಾಡಿದ್ದಾರೆ.

ವಿಡಿಯೋಗೆ 16 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿವೆ.”ಮಗು ಬಹಳ ಮುದ್ದಾಗಿದೆ, ಕಾಜಲ್ ಚರ್ಮಕ್ಕೆ ಒಳ್ಳೆಯದಲ್ಲ. ಭಾರತೀಯ ಸಂಪ್ರದಾಯದ ಪ್ರಕಾರ ಕಾಡಿಗೆ ಹಚ್ಚುವುದರಿಂದ ಮಗುವಿನ ಮೇಲೆ ಕೆಟ್ಟ ದೃಷ್ಟಿಗಳ ಕಾಟ ಬಾರದು. ಆದರೆ ಈ ಮಟ್ಟದಲ್ಲಿ ಕಾಜಲ್ ಹಾಕಲು ಮುಗ್ಧ ಕಂದಮ್ಮ ಮುಖ ಚಿತ್ರಪಟವಲ್ಲ,” ಎಂದು ನೆಟ್ಟಿಗರೊಬ್ಬರು ಮಗುವಿನ ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

https://youtu.be/hUq2mq11b7I

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...