ವಾಹನ ಮಾಲೀಕರು, ಚಾಲಕರಿಗೆ ಮುಖ್ಯ ಮಾಹಿತಿ: ಪ್ಯಾನಿಕ್ ಬಟನ್, VLTD ಅಳವಡಿಕೆಗೆ ದರ ನಿಗದಿ: ಸಾರಿಗೆ ಇಲಾಖೆ ಆದೇಶ

ಬೆಂಗಳೂರು: ರಾಜ್ಯದ ಸಾರ್ವಜನಿಕ ಸೇವಾ ವಾಹನಗಳು ಮತ್ತು ಸರಕು ಸಾಗಾಣೆ ವಾಹನಗಳು ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್(VLTD) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಾಟಲ್ ಗಳನ್ನು ಅಳವಡಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಅನುಮೋದನೆ ಪಡೆದ 12 ತಯಾರಿಕಾ ಕಂಪನಿಗಳ ಸಾಧನೆಗಳಿಗೆ ದರ ನಿಗದಿಗೊಳಿಸಿ ಆದೇಶಿಸಿದೆ.

ಜಿಎಸ್‌ಟಿ ಮತ್ತು ಇತರೆ ತೆರಿಗೆ ಒಳಗೊಂಡಂತೆ ಪ್ರತಿ VLTDಗೆ 5424 ರೂ.,  ಎಮರ್ಜೆನ್ಸಿ ಪ್ಯಾನಿಕ್ ಬಟನ್ ಗೆ 325 ರೂ., ಒಂದು ವರ್ಷ ಅವಧಿಯ ನೆಟ್ವರ್ಕ್ ಕನೆಕ್ಟಿವಿಟಿ ಮತ್ತು ನಿರ್ವಹಣೆಗೆ 1,800 ರೂ. ದರ ನಿಗದಿಪಡಿಸಲಾಗಿದೆ. ವಾಹನಗಳ ಚಾಲಕರು ಮತ್ತು ಮಾಲೀಕರು ಶೀಘ್ರವೇ ತಮ್ಮ ವಾಹನಗಳಿಗೆ ಈ ಸಾಧನಗಳನ್ನು ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಆಯುಕ್ತರು ಮನವಿ ಮಾಡಿದ್ದಾರೆ.

ನಿರ್ಭಯಾ ಯೋಜನೆಯಡಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಾಹನಗಳಲ್ಲಿ ವಿ.ಎಲ್.ಟಿ.ಡಿ. ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆದೇಶಿಸಿತ್ತು.

ರಾಜ್ಯದಲ್ಲಿ ಏಜೆನ್ಸಿಗಳು ಹೆಚ್ಚಿನ ದರ ಪಡೆಯುತ್ತಿದ್ದು, ಆರ್ಥಿಕ ಹೊರೆಯಾಗುತ್ತಿದೆ ಎಂದು ವಾಹನ ಮಾಲೀಕರು ಆರೋಪಿಸಿದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಇತ್ತೀಚೆಗೆ ಏಜೆನ್ಸಿಗಳೊಂದಿಗೆ ಸಭೆ ನಡೆಸಿದ್ದಾರೆ. 12 ಏಜೆನ್ಸಿಗಳನ್ನು ಉಪಕರಣ ಅಳವಡಿಕೆಗೆ ಗುರುತಿಸಲಾಗಿದ್ದು, ದರ ನಿಗದಿಗೊಳಿಸಿ ಆದೇಶಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read