
ಬಾಲಿವುಡ್ ಚಿತ್ರರಂಗದಲ್ಲಿ ಶಾರುಖ್ ಖಾನ್ – ಕಾಜೋಲ್ ಜೋಡಿ ಮಾಡಿರುವ ಮೋಡಿ ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’, ‘ಕುಚ್ ಕುಚ್ ಹೋತಾ ಹೇ’, ‘ಕಭಿ ಖುಷಿ ಕಭಿ ಗಂ’ ಮೊದಲಾದವುಗಳನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು.
ಇವರಿಬ್ಬರ ಅಭಿನಯದ ಯಶಸ್ವಿ ಚಿತ್ರಗಳ ಕಾರಣಕ್ಕಾಗಿಯೇ ಬಹುತೇಕರು ಶಾರುಖ್ ಖಾನ್ ಹಾಗೂ ಕಾಜೋಲ್ ನಿಜ ಜೀವನದಲ್ಲೂ ದಂಪತಿ ಎಂದೇ ಭಾವಿಸಿದ್ದರು. ಆದರೆ ಶಾರುಖ್ ಖಾನ್ ತಮ್ಮ ಬಾಲ್ಯದ ಗೆಳತಿ ಗೌರಿಯವರನ್ನು ವಿವಾಹವಾಗಿದ್ದರೆ, ಕಾಜೋಲ್, ನಟ ಅಜಯ್ ದೇವಗನ್ ಅವರನ್ನು ವರಿಸಿದ್ದಾರೆ.
ಇದರ ಮಧ್ಯೆ ಇಂಟ್ರೆಸ್ಟಿಂಗ್ ಸಂಗತಿ ಒಂದು ಬಹಿರಂಗವಾಗಿದ್ದು, ಪ್ರಸ್ತುತ ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿರುವ ಯುವ ನಟರೊಬ್ಬರು ಕೂಡ ತಮ್ಮ ಬಾಲ್ಯದಲ್ಲಿ ಶಾರುಖ್ ಖಾನ್ ಹಾಗೂ ಕಾಜೋಲ್ ನಿಜ ಜೀವನದಲ್ಲೂ ದಂಪತಿ ಎಂದು ಭಾವಿಸಿದ್ದರಂತೆ.
ಹೌದು, 2015 ರಲ್ಲಿ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಶೋ ದಲ್ಲಿ ಭಾಗವಹಿಸಿದ್ದ ನಟ ವರುಣ್ ಧವನ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಬಾಲ್ಯದಲ್ಲಿದ್ದಾಗ ಚಾರಿಟಿ ಒಂದಕ್ಕೆ ಡೊನೇಷನ್ ಕೇಳಲು ಶಾರುಖ್ ಮನೆಗೆ ಹೋದಾಗ ಗೌರಿ ಖಾನ್ ಬಾಗಿಲು ತೆರೆದಿದ್ದರಂತೆ. ಅವರನ್ನು ನೋಡಿ ವರುಣ್ ಧವನ್ ಅವಾಕ್ಕಾಗಿದ್ದು, ಮನೆಗೆ ಬಂದಾಗ ತಾಯಿ, ಗೌರಿಯವರೇ ಶಾರುಖ್ ಪತ್ನಿ ಎಂದು ತಿಳಿಸಿದ್ದರಂತೆ. ವರುಣ್ ಧವನ್ ಅವರ ಈ ಸಂದರ್ಶನದ ಹಳೆ ವಿಡಿಯೋ ಈಗ ವೈರಲ್ ಆಗಿದೆ.



