
ಕೇದಾರನಾಥದಲ್ಲಿ ಹೆಲಿಕಾಪ್ಟರ್‌ನ ಹೊರಗೆ ಸೆಲ್ಫಿ ತೆಗೆಯಲು ಯತ್ನಿಸಿ ಸರ್ಕಾರಿ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಉತ್ತರಾಖಂಡದಲ್ಲಿ ಭಾನುವಾರ ನಡೆದಿದೆ.
ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಹಣಕಾಸು ನಿಯಂತ್ರಕ ಜಿತೇಂದ್ರ ಕುಮಾರ್ ಸೈನಿ ಅವರು ಕೇದಾರನಾಥ ಧಾಮದ ಹೆಲಿಪ್ಯಾಡ್‌ನಲ್ಲಿ ನಡೆದ ಈ ದುರದೃಷ್ಟಕರ ದುರ್ಘಟನೆಗೆ ಬಲಿಯಾಗಿದ್ದಾರೆ.
ಚಾರ್ ಧಾಮ್ ಯಾತ್ರೆ ಆರಂಭವಾದ ಒಂದು ದಿನದ ನಂತರ ದುರಂತ ಘಟನೆ
ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಸೈನಿ ಹೆಲಿಕಾಪ್ಟರ್‌ನ ಟೈಲ್ ರೋಟರ್ ಬ್ಲೇಡ್‌ನ ಸಮೀಪಕ್ಕೆ ಬಂದಿದ್ದು, ಮಾರಣಾಂತಿಕ ಅಪಘಾತಕ್ಕೆ ಕಾರಣವಾಯಿತು.