ಬದೋಹಿ: ಗೆಳೆಯನ ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ವೀಡಿಯೋಗಳನ್ನು ಮಾಡಿದ್ದಲ್ಲದೇ ಹಣಕಾಸು ಪಡೆದ ಆರೋಪದ ಮೇಲೆ 21 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ 19 ವರ್ಷದ ವಿವಾಹಿತ ಮಹಿಳೆ ತನ್ನ ತವರು ಮನೆಗೆ ಭೇಟಿ ನೀಡಿದ್ದ ವೇಳೆ ಸ್ನಾನ ಮಾಡುತ್ತಿದ್ದಾಗ ಸಂಭವಿಸಿದೆ.
ಸಾವನ್ ಕುಮಾರ್ ಎಂಬಾತ ಆಕೆಯ ನಗ್ನ ವೀಡಿಯೋ ಮಾಡಿ ಬಳಿಕ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಅಲ್ಲದೇ ಮಹಿಳೆ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಹಣವನ್ನು ಸುಲಿಗೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 2 ರಂದು ಜನಸಂಪರ್ಕ ಸಭೆ ವೇಳೆ ಅರ್ಜಿಯನ್ನು ನೀಡುವ ಮೂಲಕ ಮಹಿಳೆ ದೂರು ದಾಖಲಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ 64ನೇ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.