ಅಪ್ರಾಪ್ತನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಈ ಮೊದಲೇ ಬಂಧಿತಳಾಗಿದ್ದ 23 ವರ್ಷದ ಯುವತಿಯೊಬ್ಬಳು ಜಾಮೀನಿನ ಮೇಲೆ ಹೊರಬಂದ ಬಳಿಕ ಮತ್ತಷ್ಟು ಅಪ್ರಾಪ್ತರೊಂದಿಗೆ ಲೈಂಗಿಕ ಸಂಪರ್ಕಕ್ಕಾಗಿ 14 ವರ್ಷದ ಹುಡುಗಿಯಂತೆ ಪೋಸ್ ಕೊಟ್ಟಿರುವ ಘಟನೆ ಅಮೆರಿಕಾದಲ್ಲಿ ನಡೆದಿದ್ದು, ಇದೀಗ ಟ್ಯಾಂಪಾ ಪೊಲೀಸ್ ಇಲಾಖೆ ಆಕೆಯನ್ನು ಬಂಧನಕ್ಕೆ ಒಳಪಡಿಸಿದೆ.
23 ವರ್ಷದ ಅಲಿಸಾ ಅನ್ ಜಿಂಗರ್ ಬಂಧನಕ್ಕೊಳಗಾಗಿರುವ ಯುವತಿಯಾಗಿದ್ದು, ಈಕೆಯಿಂದ ಶೋಷಣೆಗೆ ಒಳಗಾಗಿದ್ದ ನಾಲ್ವರು ಸಂತ್ರಸ್ತ ಬಾಲಕರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಇನ್ನಷ್ಟು ಹುಡುಗರನ್ನು ಈಕೆ ಬಲಿಪಶು ಮಾಡಿರುವ ಶಂಕೆಯನ್ನು ವ್ಯಕ್ತಪಡಿಸಿರುವ ಪೊಲೀಸರು ದೂರು ನೀಡುವಂತೆ ಕೋರಿದ್ದಾರೆ.
12 ರಿಂದ 15 ವರ್ಷದ ಶಾಲಾ ಬಾಲಕರನ್ನೇ ತನ್ನ ಲೈಂಗಿಕ ಶೋಷಣೆಗೆ ಗುರಿಯಾಗಿಸಿಕೊಳ್ಳುತ್ತಿದ್ದ ಆಲಿಸಾ ಆನ್ಲೈನ್ ನಲ್ಲಿ ಅವರುಗಳನ್ನು ಸಂಪರ್ಕಿಸುವ ವೇಳೆ ತಾನು 14 ವರ್ಷದ ಬಾಲಕಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಳು. ಬಳಿಕ ಅವರಿಗೆ ಕಾಮ ಪ್ರಚೋದಕ ವಿಡಿಯೋಗಳನ್ನು ಕಳುಹಿಸಿ ತನ್ನ ಬಲೆಗೆ ಬೀಳಿಸಿಕೊಂಡು ಕಾರ್ಯ ಸಾಧಿಸುತ್ತಿದ್ದಳು.
ಜೊತೆಗೆ ಸ್ನಾಪ್ ಚಾಟ್ ಮೂಲಕ ಹಲವಾರು ಮಕ್ಕಳಿಗೆ ಈಕೆ ಅಶ್ಲೀಲ ವಿಡಿಯೋವನ್ನು ಕಳುಹಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಫ್ಲೋರಿಡಾದಲ್ಲಿ ಲೈಂಗಿಕ ಸಂಪರ್ಕಕ್ಕಾಗಿ ಒಪ್ಪಿಗೆಯ ವಯಸ್ಸು 18 ಆಗಿದ್ದು, ಆದರೆ ಆಲಿಸಾ ಅಪ್ರಾಪ್ತ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಳು. ಶುಕ್ರವಾರದಂದು ಬಂಧಿತೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಸೋಮವಾರ ಮತ್ತೆ ವಿಚಾರಣೆ ನಡೆಯಲಿದೆ.
https://twitter.com/CollinRugg/status/1776738397983305893?ref_src=twsrc%5Etfw%7Ctwcamp%5Etweetembed%7Ctwterm%5E1776738397983305893%7Ctwgr%5E5cdafe982cee8586f4760b23eb970cc72ac205f0%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fndtvworld-epaper-dh5b558d662bc648ce9f657d7bdbe80133%2Fuswomanchargedaftersheposedas14yearoldtohavesexwithteenageboys-newsid-n598169520