ನವದೆಹಲಿ: ಪ್ರಧಾನಿ ಮೋದಿ ಅವರ ಅಮೆರಿಕದ ಅಧಿಕೃತ ರಾಜ್ಯ ಭೇಟಿಯ ಸಮಾರೋಪ ಸಮಾರಂಭದಲ್ಲಿ ಭಾರತದ ರಾಷ್ಟ್ರಗೀತೆ ‘ಜನಗಣ ಮನ’ ಹಾಡಿದ ನಂತರ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು.
38 ವರ್ಷದ ಮೇರಿ ಮಿಲ್ಬೆನ್ ಅವರು ವಾಷಿಂಗ್ಟನ್ DC ಯಲ್ಲಿನ ರೊನಾಲ್ಡ್ ರೇಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಶನ್(USICF) ಆಯೋಜಿಸಿದ ಆಹ್ವಾನ-ಮಾತ್ರ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಹಾಡಿದರು.
ಪ್ರಮುಖ ಆಫ್ರಿಕನ್-ಅಮೇರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿ, ಮೇರಿ ಮಿಲ್ಬೆನ್ ಅವರು ರಾಷ್ಟ್ರೀಯ ಗೀತೆ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಹಾಡುವ ಮೂಲಕ ಭಾರತದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.
ಕಾರ್ಯಕ್ರಮದ ಮೊದಲು, ಮಿಸ್ ಮಿಲ್ಬೆನ್ ಅವರು ಪ್ರಧಾನಿ ಮೋದಿಯವರ ಎದುರು ಭಾರತೀಯ ರಾಷ್ಟ್ರಗೀತೆಯನ್ನು ಹಾಡಲು ಅವಕಾಶ ಸಿಕ್ಕಿರುವುದು ನನಗೆ ಸಿಕ್ಕದ ದೊಡ್ಡ ಗೌರವ ಎಂದು ಹೇಳಿದ್ದರು.
ಅಮೆರಿಕನ್ ಮತ್ತು ಭಾರತೀಯ ಗೀತೆಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಹೇಳುತ್ತವೆ. ಇದು ಯುಎಸ್-ಭಾರತದ ಸಂಬಂಧದ ನಿಜವಾದ ಸಾರವಾಗಿದೆ. ಸ್ವತಂತ್ರ ರಾಷ್ಟ್ರವನ್ನು ಸ್ವತಂತ್ರ ಜನರಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜನಸಮೂಹ ರಾಷ್ಟ್ರಗೀತೆ ಹಾಡುವುದನ್ನು ಕೇಳಲು ನನಗೆ ತುಂಬಾ ಇಷ್ಟವಾಯಿತು ಎಂದು ಮಿಲ್ಬೆನ್ ಸಂತಸ ವ್ಯಕ್ತಪಡಿಸಿದ್ದು, ಮೋದಿ ಒಬ್ಬ ಕರುಣಾಮಯಿ ವ್ಯಕ್ತಿ ಎಂದು ಪ್ರತಿಪಾದಿಸಿದ್ದಾರೆ. ನಾನು ಇಲ್ಲಿರುವುದು ನನಗೆ ತುಂಬಾ ಗೌರವವಾಗಿದೆ. ಪ್ರಧಾನಮಂತ್ರಿ ಅವರು ಅಂತಹ ಅದ್ಭುತ ಮತ್ತು ಕರುಣಾಮಯಿ ವ್ಯಕ್ತಿ. ಈ ವಾರ ಅವರ ರಾಜ್ಯ ಭೇಟಿಯ ಭಾಗವಾಗಿರುವುದು ಗೌರವವಾಗಿದೆ. ಜನಸಂದಣಿಯು ರಾಷ್ಟ್ರಗೀತೆಯನ್ನು ಹಾಡುವುದನ್ನು ನಾನು ಇಷ್ಟಪಟ್ಟೆ ಎಂದು ಮಿಲ್ಬೆನ್ ಹೇಳಿದರು.
ಇದಕ್ಕೂ ಮೊದಲು, ಮಿಲ್ ಬೆನ್ ಭಾರತದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಆಚರಣೆಯಲ್ಲಿ ಪ್ರದರ್ಶನ ನೀಡಲು ಅಧಿಕೃತ ಅತಿಥಿಯಾಗಿ ಭಾರತಕ್ಕೆ ತನ್ನ ಮೊದಲ ಪ್ರವಾಸವನ್ನು ಮಾಡಿದರು. ಆಕೆಯನ್ನು ಭಾರತ ಸರ್ಕಾರ ಆಹ್ವಾನಿಸಿತ್ತು.