ನಾಪತ್ತೆಯಾಗಿದ್ದ ಟ್ರಕ್; ಏರ್ ಟ್ಯಾಗ್ ಮೂಲಕ ಪತ್ತೆಯಾದ ನಂತರ ಕಳ್ಳನನ್ನು ಗುಂಡಿಕ್ಕಿ ಕೊಂದ ಟ್ರಕ್ ಮಾಲೀಕ

ಟ್ರಕ್ ಅನ್ನು ಕದಿಯಲು ಪ್ರಯತ್ನಿಸಿದ ಅಮೆರಿಕಾದ ವ್ಯಕ್ತಿಯನ್ನು ಟ್ರಕ್ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ.‌ ಕಳ್ಳನನ್ನು ಟ್ರಕ್ ಮಾಲೀಕರ ಆಪಲ್ ಏರ್‌ಟ್ಯಾಗ್ ಟ್ರ್ಯಾಕ್ ಮಾಡಿದ ನಂತರ ಕಳ್ಳನ ಮೇಲೆ ಗುಂಡು ಹಾರಿಸಲಾಗಿದೆ.‌

ಯುಎಸ್ ಮೂಲದ ಸ್ಯಾನ್ ಆಂಟೋನಿಯೊ ಪೊಲೀಸರಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಳ್ಳತನವಾದ ವಾಹನದ ವರದಿ ಬಂದಿತ್ತು. ಬ್ರೇಸ್‌ವ್ಯೂ ಪ್ರದೇಶದ ಮನೆಯಿಂದ ವಾಹನ ಕಳುವಾಗಿತ್ತು.

ಈ ವೇಳೆ ಅಧಿಕಾರಿಗಳು ಕದ್ದ ಟ್ರಕ್ ಅನ್ನು ಮರುಪಡೆಯುವ ಮೊದಲು, ವಾಹನದಲ್ಲಿದ್ದ ಏರ್‌ಟ್ಯಾಗ್‌ನ ಸಹಾಯದಿಂದ ಟ್ರಕ್ ಮಾಲೀಕರು ತಮ್ಮದೇ ಆದ ತನಿಖೆಯನ್ನು ನಡೆಸಲು ನಿರ್ಧರಿಸಿದರು. ಟ್ರಕ್‌ ಆಗ್ನೇಯ ಮಿಲಿಟರಿ ಡ್ರೈವ್‌ನಲ್ಲಿರುವ ಶಾಪಿಂಗ್ ಸೆಂಟರ್‌ ಬಳಿ ಇರೋದಾಗಿ ಏರ್ ಟ್ಯಾಗ್ ನಿಂದ ಪತ್ತೆಯಾಗಿತ್ತು. ಈ ಹಂತದಲ್ಲಿ ಪೊಲೀಸರಿಗಾಗಿ ಕಾಯುವ ಬದಲು, ಟ್ರಕ್ ಮಾಲೀಕರು ಟ್ರಕ್ ಪಡೆದು ಶಂಕಿತನನ್ನು ಎದುರಿಸಲು ನಿರ್ಧರಿಸಿದರು.

ಟ್ರಕ್ ಇದ್ದ ಸ್ಥಳಕ್ಕೆ ಬಂದ ಮಾಲೀಕರು ಶಂಕಿತ ಕಳ್ಳನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ನಂಬಲಾಗಿದ್ದರೂ ಮೃತ ಶಂಕಿತ ಕಳ್ಳನ ಬಳಿ ಬಂದೂಕಿತ್ತಾ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read