ಬೆಂಗಳೂರು: ಬಿಬಿಎಂಪಿ ಕಚೇರಿಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಮಾತನಾಡಿದ ಅವರು, ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬಹುತೇಕ ಬಿಬಿಎಂಪಿ ಕಚೇರಿಗಳಲ್ಲಿ ಅಧಿಕಾರಿಗಳೇ ಇರಲಿಲ್ಲ. ಎಲ್ಲರೂ ವೈಕುಂಠ ಏಕಾದಶಿ ಹಿನ್ನೆಲೆ ಪೂಜೆಗೆ ಹೋಗಿದ್ದರು. ಕಚೇರಿಗಳಲ್ಲಿ ಇರುವ ರಿಜಿಸ್ಟರ್ ಬುಕ್ ನಲ್ಲಿ ಎಂಟ್ರಿ ಇಲ್ಲ. ಯಾರು ಯಾವಾಗಲಾದರೂ ಬರಬಹುದು ಹೋಗಬಹುದು .ಏನೇ ಕೇಳಿದರು ಅಧಿಕಾರಿಗಳು ಸುಮ್ಮನೆ ನಿಂತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಶಾಕಿಂಗ್ ವಿಚಾರ ಅಂದ್ರೆ ಅಮ್ಮನ ಬದಲು ಮಗ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೇಸ್ ವರ್ಕರ್ ಕವಿತಾ ಅವರ ಬದಲಿಗೆ ಮಗ ಕೆಲಸಕ್ಕೆ ಬಂದಿದ್ದಾನೆ. ಎಲ್ಲಿ ನಿಮ್ಮ ಅಮ್ಮ ಅಂದ್ರೆ ಅಡುಗೆ ಮಾಡ್ತಿದ್ದಾರೆ ಎಂದು ಮಗ ಹೇಳಿದ್ದಾನೆ. ಎಆರ್ಒ ಸುಜಾತ ಮಧ್ಯಾಹ್ನ 3:30ಕ್ಕೆ ಕಚೇರಿಗೆ ಬಂದಿದ್ದಾರೆ. ಯಾರು ಬೇಕಾದರೂ ಬರಬಹುದು ಹೋಗಬಹುದು ಎಂದು ಹೇಳಿದ್ದಾರೆ.
ಬಿಬಿಎಂಪಿ ಕಚೇರಿಗಳನ್ನು ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಆಯುಕ್ತರನ್ನು ಕರೆಸಿ ಮಾಹಿತಿ ಪಡೆಯುತ್ತೇವೆ. ತಪ್ಪಿಸ್ಥರ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸುತ್ತೇವೆ ಎಂದು ಕಚೇರಿಗಳ ಪರಿಶೀಲನೆ ನಂತರ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಹೇಳಿದ್ದಾರೆ.