LGM ಕೇಕ್​ ಕಟ್ಟಿಂಗ್​ ಸಮಾರಂಭದಲ್ಲಿ ಯೋಗಿ ಬಾಬು ಕಾಲೆಳೆದ ಧೋನಿ : ವಿಡಿಯೋ ವೈರಲ್​

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಸಿಂಗ್​ ಧೋನಿ ʼಲೆಟ್ಸ್​ ಗೆಟ್​ ಮ್ಯಾರೀಡ್ʼ​ ಸಿನಿಮಾದ ಮೂಲಕ ನಿರ್ಮಾಪಕರಾಗಿ ಕಾಲಿವುಡ್​ಗೆ ಕಾಲಿಟ್ಟಿದ್ದಾರೆ.

ಎಲ್​ಜಿಎಂ ಸಿನಿಮಾದ ಆಡಿಯೋ ಹಾಗೂ ಟ್ರೈಲರ್​ ಲಾಂಚ್​ ಕಾರ್ಯಕ್ರಮ ಜುಲೈ 10ರಂದು ಚೆನ್ನೈನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಧೋನಿ, ಯೋಗಿ ಬಾಬುವಿಗೆ ಕಾಲೆಳೆದಿದ್ದು ಈ ವಿಡಿಯೋ ವೈರಲ್​ ಆಗಿದೆ. ಧೋನಿ ಯೋಗಿ ಬಾಬುಗೆ ಕೇಕ್​ ತಿನ್ನಿಸಬೇಕಾದ ಸಂದರ್ಭದಲ್ಲಿ ಅವರಿಗೆ ಆಟ ಆಡಿಸುವ ಮೂಲಕ ಮಜಾ ತೆಗೆದುಕೊಂಡಿದ್ದಾರೆ.

‘ಎಲ್‌ಜಿಎಂ’ ಬಿಡುಗಡೆ ಸಮಾರಂಭದಲ್ಲಿ ಯೋಗಿ ಬಾಬು ಎಂಎಸ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ನೇಮಿಸುವಂತೆ ಕೇಳಿಕೊಂಡರು. ಕ್ರಿಕೆಟಿಗನ ತಮಾಷೆಯ ಉತ್ತರವು ಹೃದಯಗಳನ್ನು ಗೆದ್ದಿದೆ ಮತ್ತು ಕ್ಲಿಪ್‌ಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಇದೀಗ, ‘ಎಲ್‌ಜಿಎಂ’ ಬಿಡುಗಡೆಯ ಕೇಕ್ ಕತ್ತರಿಸುವ ಸೆಷನ್‌ನಲ್ಲಿ ನಡೆದ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಯೋಗಿ ಬಾಬು ಮತ್ತು ಎಂಎಸ್ ಧೋನಿ ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದು. ಅವರು ಕೇಕ್ ಕತ್ತರಿಸಿದ ತಕ್ಷಣ, ಯೋಗಿ ಬಾಬು, ಧೋನಿ ತಮಗೆ ಈಗ ಕೇಕ್​ ತಿನ್ನಿಸಬಹುದು ಎಂದು ಕಾಯುತ್ತಿದ್ದರೆ ಧೋನಿ ಸೀದಾ ತಾವೇ ಕೇಕ್​ ತಿಂದು ಯೋಗಿ ಬಾಬುರ ಕಾಲೆಳೆದರು. ತಮಾಷೆಗಳ ಬಳಿಕ ಧೋನಿ, ಯೋಗಿ ಬಾಬುಗೆ ಕೇಕ್​ ತಿನ್ನಿಸಿದರು.

https://twitter.com/DHONIism/status/1679729477830717440?ref_src=twsrc%5Etfw%7Ctwcamp%5Etweetembed%7Ctwterm%5E1679729477830717440%7Ctwgr%5Ec959b7635d5b9064dc84be0b6dbd6d2b6da4ec73%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Funseen-video-thala-dhoni-makes-fun-of-yogi-babu-at-lgm-cake-cutting-session-2406556-2023-07-14

MS Dhoni fooled Yogi Babu while feeding cake at 'LGM' trailer and audio launch in Chennai.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read