ತಂದೆ – ತಾಯಿ ಜೊತೆ ಗೋವಾದಲ್ಲಿ ರಜೆ ಕಳೆದ ಯುಕೆ ಪ್ರಥಮ ಮಹಿಳೆ….! ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ -ಪುತ್ರಿ ಅಕ್ಷತಾ ಮೂರ್ತಿ ಸರಳತೆಗೆ ಬೆರಗಾದ ಗೈಡ್

ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ತಮ್ಮಿಬ್ಬರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದು, ತಮ್ಮ ತಂದೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ತಾಯಿ ಸುಧಾ ಮೂರ್ತಿ ಅವರೊಂದಿಗೆ ಗೋವಾದ ಬೀಚಿನಲ್ಲಿ ರಜಾ ಕಳೆದಿದ್ದಾರೆ.

ದಕ್ಷಿಣ ಗೋವಾದ Benaulim ಬೀಚಿನಲ್ಲಿ ಇವರುಗಳು ಕಾಲ ಕಳೆದಿದ್ದು, ಈ ಸಂದರ್ಭದಲ್ಲಿ ವಾಟರ್ ಸ್ಪೋರ್ಟ್ ಬ್ಯುಸಿನೆಸ್ ಹೊಂದಿರುವ ಸ್ಥಳೀಯ ಫ್ರಾನ್ಸಿಸ್ಕೊ ಫರ್ನಾಂಡಿಸ್ ಎಂಬವರೊಂದಿಗೆ ಮಾತನಾಡಿದ್ದಾರೆ.

ಮೊದಲಿಗೆ ಫ್ರಾನ್ಸಿಸ್ಕೊ ಫರ್ನಾಂಡಿಸ್ ಇವರು ಎಲ್ಲರಂತೆ ಪ್ರವಾಸಿಗರು ಎಂದು ಭಾವಿಸಿದ್ದು, ಬಳಿಕ ಅವರ ವೈದ್ಯ ಸ್ನೇಹಿತರ ಪತ್ನಿ ನೀವು ಯಾರೊಂದಿಗೆ ಮಾತನಾಡಿದ್ದೀರಿ ಎಂಬುದು ಗೊತ್ತಾಯ್ತಾ ಎಂದು ಕೇಳಿದ್ದಾರೆ. ಬಳಿಕ ಅವರೇ ಬ್ರಿಟನ್ ಪ್ರಧಾನಿಯ ಪತ್ನಿ ಅಕ್ಷತಾ ಮೂರ್ತಿ ಎಂದು ಹೇಳಿದ್ದಾರೆ.

ನಾರಾಯಣ ಮೂರ್ತಿ, ಸುಧಾ ಮೂರ್ತಿ ಹಾಗೂ ಅಕ್ಷತಾ ಮೂರ್ತಿಯವರ ಸರಳತೆಗೆ ಫ್ರಾನ್ಸಿಸ್ಕೊ ಬೆರಗಾಗಿದ್ದು, ತಮ್ಮ ಜೀವಮಾನದಲ್ಲೇ ಈ ಭೇಟಿಯನ್ನು ಮರೆಯುವುದಿಲ್ಲ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read