ಭಾನುವಾರ ರಾತ್ರಿ ನಡೆದ ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಗಳಿಸಿದ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ತಂಡ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ತಯಾರಕರಿಗೆ ಹಲವರು ಶುಭ ಕೋರುತ್ತಿದ್ದಾರೆ.
RRR ನ ನಾಟು ನಾಟು ಹಾಡು 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಗುನೀತ್ ಮೊಂಗಾ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ RRR ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. “ಆಸ್ಕರ್‌ನಲ್ಲಿ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದ್ದಕ್ಕಾಗಿ MM ಕೀರವಾಣಿ, ಚಂದ್ರ ಬೋಸ್ ಮತ್ತು ಇಡೀ RRR ತಂಡಕ್ಕೆ ಅಭಿನಂದನೆಗಳು” ಎಂದಿದ್ದಾರೆ.
ಇದೇ ವೇಳೆ ದಿ ಎಲಿಫೆಂಟ್ ವಿಸ್ಪರರ್ಸ್ ತಂಡವನ್ನೂ ಅವರು ಅಭಿನಂದಿಸಿದ್ದಾರೆ, ” ದಿ ಎಲಿಫೆಂಟ್ ವಿಸ್ಪರರ್ಸ್’ ನ ಸಂಪೂರ್ಣ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಇಬ್ಬರು ಮಹಿಳೆಯರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡ ಎರಡೂ ತಂಡವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಇವರು ಭಾರತವನ್ನು ಉನ್ನತ ಮಟ್ಟಕ್ಕೆ ಕರೆದೊಯ್ದರು ಎಂದು ಶ್ಲಾಘಿಸಿದ್ದಾರೆ.