Watch Video: ಕಟ್ಟಡ ಪ್ರವೇಶಿಸಿದ ಎರಡು ಘೇಂಡಾ ಮೃಗಗಳು

ವನ್ಯಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಅನೇಕ ಜನರು ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಜೀಪ್‌ ಮೂಲಕ ನಿಮ್ಮನ್ನು ಅರಣ್ಯ ಪ್ರದೇಶದ ಕರೆದೊಯ್ಯುತ್ತಿರುವಾಗ ಪ್ರಾಣಿಗಳು ಕಂಡು ಬರುತ್ತವೆ, ಆದರೆ ನೀವು ತಂಗಿರುವ ಕಟ್ಟಡಕ್ಕೆ ಪ್ರಾಣಿ ಪ್ರವೇಶಿಸಿದ್ದನ್ನು ನೀವು ಎಂದಾದರೂ ನಿರೀಕ್ಷಿಸುತ್ತೀರಾ? ಇತ್ತೀಚೆಗೆ ಎರಡು ಘೇಂಡಾಮೃಗಗಳು ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಕಟ್ಟಡಕ್ಕೆ ಪ್ರವೇಶಿಸಿದೆ !

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ್​ ನಂದಾ ಅವರು ಎರಡು ಘೇಂಡಾಮೃಗಗಳು ಕಟ್ಟಡದೊಳಗೆ ನಡೆಯುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೋಣೆಯ ಒಳಗಿರುವ ವ್ಯಕ್ತಿಯೊಬ್ಬ ವೀಡಿಯೊವನ್ನು ಶೂಟ್ ಮಾಡುತ್ತಿರುವಾಗ, ಅವನು “ಓ ಮೈ ಗಾಡ್” ಎಂದು ಹೇಳುವುದನ್ನು ಕೇಳಬಹುದು.

ಈ ವೀಡಿಯೊವನ್ನು ಎರಡು ದಿನದ ಹಿಂದೆ ಹಂಚಿಕೊಳ್ಳಲಾಗಿದೆ. ಹಂಚಿಕೊಂಡಾಗಿನಿಂದ, ಇದನ್ನು 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 2000 ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ವೀಡಿಯೊಗೆ ಹಲವಾರು ಕಾಮೆಂಟ್‌ಗಳೂ ಇವೆ.

https://www.youtube.com/watch?v=ZGZKj1iurLA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read