ಪ್ರದೀಪ್ ದೊಡ್ಡಯ್ಯ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಔಟ್ ಆಫ್ ಸಿಲಬಸ್’ ಚಿತ್ರದ ಟ್ರೈಲರ್ ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ಗೆ ನೋಡುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಕಂಡಿದೆ.
ಈ ಚಿತ್ರವನ್ನು AD6 ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ತನುಷ್ ಎಸ್ ವಿ ದೇಸಾಯಿ ಗೌಡ – ಶ್ರೀಮತಿ. ಕೆ ವಿಜಯಕಲಾ ಸುಧಾಕರ್ ನಿರ್ಮಾಣ ಮಾಡಿದ್ದು, ಪ್ರದೀಪ್ ದೊಡ್ಡಯ್ಯ ಸೇರಿದಂತೆ ರಿತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲಾ ಬಿರಾದಾರ್, ಮಂಜು ಪಾವಗಡ, ತೆರೆ ಹಂಚಿಕೊಂಡಿದ್ದಾರೆ. ಉಮೇಶ್ ಆರ್ ಬಿ ಸಂಕಲನ, ಹಾಗೂ ದೇವ್ ವಡ್ಡೆ ಛಾಯಾಗ್ರಹಣವಿದೆ.