ಮದ್ಯಪಾನ ಮಾಡಿ ಕಾರು ಚಲಾಯಿಸುವಂತಿಲ್ಲ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಸಿಕ್ಕಿಬಿದ್ದರೆ ದಂಡ ಮಾತ್ರವಲ್ಲ, ಜೈಲು ಶಿಕ್ಷೆಯೂ ಆಗಬಹುದು. ಇಷ್ಟಾದ್ರೂ ಜನರು ಕುಡಿತದ ಚಟಕ್ಕೆ ಬಿದ್ದು ಸಾರ್ವಜನಿಕರ ಪ್ರಾಣದ ಜೊತೆಯೂ ಚೆಲ್ಲಾಟವಾಡ್ತಾರೆ.
ಅಮೆರಿಕದ ಟೆಕ್ಸಾಸ್ನಲ್ಲಿ ಯುವತಿಯೊಬ್ಬಳು ಕುಡಿದು ಕಾರು ಚಲಾಯಿಸಿ ಸಿಕ್ಕಿಬಿದ್ದಿದ್ದಾಳೆ. ಅಷ್ಟೇ ಅಲ್ಲ ಅಲ್ಲಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೇ ತನ್ನ ಜೊತೆ ಲೈಂಗಿಕ ಸಂಬಂಧ ಹೊಂದುವಂತೆ ಆಫರ್ ಕೊಟ್ಟಿದ್ದಾಳೆ.
ಯುವತಿ ಕಂಠ ಪೂರ್ತಿ ಕುಡಿದು ಟೈಟಾಗಿದ್ಲು. ಅದೇ ಅಮಲಿನಲ್ಲೇ ಕಾರನ್ನು ಟ್ರಾಫಿಕ್ ಸೈನ್ ಬೋರ್ಡ್ಗೆ ಗುದ್ದಿದ್ದಾಳೆ. ನಿಯಂತ್ರಣ ತಪ್ಪಿದ ಕಾರು ರಸ್ತೆಬದಿಯ ಪಾದಚಾರಿ ಮಾರ್ಗವನ್ನು ದಾಟಿಕೊಂಡು ಟ್ರಾಫಿಕ್ ಸೈನ್ ಬೋರ್ಡ್ಗೆ ಡಿಕ್ಕಿ ಹೊಡೆದಿತ್ತು. ಪೊಲೀಸರು ಬರುವ ಮುನ್ನವೇ ಯುವತಿ ಅಲ್ಲಿಂದ ಪರಾರಿಯಾಗಿದ್ದಳು.
ಸ್ವಲ್ಪ ಸಮಯದ ನಂತರ ಒಬ್ಬ ವ್ಯಕ್ತಿ ಬಂದು ಅಪಘಾತಕ್ಕೆ ನಾನೇ ಹೊಣೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ. ಆದ್ರೆ ಚಾಣಾಕ್ಷ ಪೊಲೀಸರು 21 ವರ್ಷದ ಡುಲ್ಸೆ ಒರ್ಟಿಜ್ ಎಂಬ ಯುವತಿಯನ್ನು ಬಂಧಿಸಿದ್ದಾರೆ.
ಠಾಣೆಗೆ ಕರೆದೊಯ್ಯುತ್ತಿದ್ದಾಗ ಯುವತಿ ತನಿಖಾಧಿಕಾರಿಗೆ ಲಂಚ ನೀಡಲು ಯತ್ನಿಸಿದ್ದಾಳೆ. ಅಧಿಕಾರಿ ಒಪ್ಪದಿದ್ದಾಗ ತನ್ನ ಜೊತೆಗೆ ಸೆಕ್ಸ್ ಮಾಡು, ಬಂಧನದಿಂದ ಬಿಡುಗಡೆ ಕೊಡು ಅಂತಾ ಕೇಳಿದ್ದಾಳೆ. ಈ ಬಗ್ಗೆ ಖುದ್ದು ಪೊಲೀಸ್ ಅಧಿಕಾರಿಯೇ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಬಂಧಿತ ಯುವತಿ ಜಾಮೀನಿನ ನಿರೀಕ್ಷೆಯಲ್ಲಿದ್ದಾಳೆ.