
ನಮ್ಮ ಆಹಾರ ಶೈಲಿಯಿಂದಾಗಿಯೇ ಹಲವಾರು ರೀತಿಯ ಕಾಯಿಲೆಗಳು ಕಾಡುತ್ತವೆ. ದಿನಕ್ಕೆರಡು ಬಾರಿ ಹಲ್ಲುಜ್ಜುವ ಮೂಲಕ ಹಲ್ಲಿನ ಹಲವಾರು ಸಮಸ್ಯೆಗಳನ್ನು ದೂರವಿಡಬಹುದು.
ಈರುಳ್ಳಿ ಬೀಜ ಸುಟ್ಟಾಗ ಅದರಿಂದ ಬರುವ ಹೊಗೆಯನ್ನು ಹಲ್ಲು ನೋವಿರುವ ಜಾಗಕ್ಕೆ ಕೊಡುವುದರಿಂದ ನೋವು ಬೇಗನೆ ನಿವಾರಣೆಯಾಗುತ್ತದೆ.
ಇಂಗನ್ನು ಬಿಸಿ ನೀರಿಗೆ ಹಾಕಿ ಕುದಿಸಿದ ನಂತರ ಆ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಆಗ ಹಲ್ಲಿನಲ್ಲಿರುವ ಹುಳು ಸತ್ತು ಹಲ್ಲು ನೋವು ನಿವಾರಣೆಯಾಗುತ್ತದೆ.
ಸಾಸಿವೆ ಎಣ್ಣೆ ಜೊತೆ ಸೈಂಧವ ಲವಣ ಸೇರಿಸಿ ಚೆನ್ನಾಗಿ ಕಲಸಿ ಪೇಸ್ಟ್ ಮಾಡಿಕೊಂಡು ನೋವು ಇರುವ ಹಲ್ಲಿನ ಮೇಲೆ ಇಡುವುದರಿಂದ ಹಲ್ಲಿನಲ್ಲಿ ಇರುವ ಹುಳುಕು ಕಡಿಮೆಯಾಗಿ ಹಲ್ಲುನೋವು ನಿವಾರಣೆಯಾಗುತ್ತದೆ. ಲವಂಗವನ್ನು ಪುಡಿ ಮಾಡಿ ಹಲ್ಲು ನೋವು ಇರುವೆಡೆ ಇಟ್ಟರೆ ಹಲ್ಲು ನೋವು ಕಡಿಮೆಯಾಗುತ್ತದೆ.