ಪಾತಾಳಕ್ಕೆ ಕುಸಿದ ಟೊಮೆಟೊ ದರ: ರೈತರು ಕಂಗಾಲು

ಬೆಂಗಳೂರು: ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವುದರಿಂದ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರ ಮೇಲೆ ಪರಿಣಾಮ ಉಂಟಾಗಿದೆ.

ಬಾಂಗ್ಲಾ ಬಿಕ್ಕಟ್ಟಿಗೆ ಮುನ್ನ ಕೋಲಾರ ಎಪಿಎಂಸಿಯಲ್ಲಿ 15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ದರ ಒಂದು 1100 ರೂ.ನಿಂದ 1200 ರೂಪಾಯಿವರೆಗೆ ಇತ್ತು. ಪ್ರಸ್ತುತ 350 ರಿಂದ 480 ರೂ. ಕುಸಿದಿದೆ. ಕಳೆದ 15 ದಿನಗಳ ಹಿಂದೆ ಪ್ರತಿ ಕೆಜಿಗೆ 40 ರುಪಾಯಿ ಇದ್ದ ಚಿಲ್ಲರೆ ಟೊಮೆಟೊ ದರ 12 ರೂಪಾಯಿಗೆ ಇಳಿಕೆಯಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊ ಪಶ್ಚಿಮ ಬಂಗಾಳ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಅಲ್ಲಿಂದ ಬಾಂಗ್ಲಾದ ವಿವಿಧ ಮಾರುಕಟ್ಟೆಗಳಿಗೆ ರವಾನೆಯಾಗುತ್ತದೆ. ಬಾಂಗ್ಲಾದಲ್ಲಿ ಬಿಕ್ಕಟಿನ ಪರಿಸ್ಥಿತಿ ಉಂಟಾಗಿರುವುದರಿಂದ ಟೊಮೆಟೊ ಮಾರಾಟದಲ್ಲಿ ಅರ್ಧದಷ್ಟು ಕುಸಿತವಾಗಿದೆ.

ಈ ಮೊದಲು ಪ್ರತಿದಿನ ಸುಮಾರು 50 ಲಾರಿ ಲೋಡ್ ನಷ್ಟು ಗುಣಮಟ್ಟದ ಟೊಮೆಟೊ ಪಶ್ಚಿಮ ಬಂಗಾಳಕ್ಕೆ ರವಾನಿಸಲಾಗುತ್ತಿತ್ತು. ಈಗ 20 ಲೋಡ್ ಟೊಮೆಟೋ ಕಳುಹಿಸಲಾಗುತ್ತಿದೆ. ಇದರಿಂದಾಗಿ ದರ ಕುಸಿತವಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read