
ಪ್ರೊ ಕಬಡ್ಡಿ ಪ್ಲೇ ಆಫ್ ಗೆ ಈಗಾಗಲೇ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ಕ್ವಾಲಿಫೈಯಾಗಿದ್ದು, ದಬಾಂಗ್ ಡೆಲ್ಲಿ ತಂಡ ಕೂಡ ಇನ್ನೊಂದು ಪಂದ್ಯವನ್ನು ಗೆದ್ದರೆ ಪ್ಲೇ ಆಫ್ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲಿದೆ.
ಇಂದು ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟನ್ ಮುಖಮುಖಿಯಾಗಲಿದ್ದು, ಬೆಂಗಳೂರು ಬುಲ್ಸ್ ಈ ಪಂದ್ಯದಲ್ಲಿ ಜಯಭೇರಿ ಆದರೆ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿಕೊಳ್ಳಬಹುದಾಗಿದೆ.
ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ದಬಾಂಗ್ ಡೆಲ್ಲಿ ಸೆಣಸಾಡಲಿದ್ದು, ತನ್ನ ಹೋಂ ಗ್ರೌಂಡ್ ನಲ್ಲಿ ಕಡೆಯ ಪಂದ್ಯವನ್ನಾಡುತ್ತಿರುವ ದಬಾಂಗ್ ಡೆಲ್ಲಿ ಈ ಪಂದ್ಯವನ್ನು ಜಯಭೇರಿಯಾಗುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಸಂತಸ ತರಲಿದೆಯಾ ಕಾದು ನೋಡಬೇಕಾಗಿದೆ. ಇಂದು ದೆಹಲಿಯಲ್ಲಿನ ಅಂತಿಮ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗಿದ್ದಾರೆ.