
ಪ್ರೊ ಕಬಡ್ಡಿ ಪಾಯಿಂಟ್ ಟೇಬಲ್ ನಲ್ಲಿ ಏಳು ಹಾಗೂ ಎಂಟನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ಪೈರೇಟ್ಸ್ ಇಂದು ಮುಖಾಮುಖಿಯಾಗಲಿವೆ. ಬೆಂಗಳೂರು ಬುಲ್ಸ್ ನ ಪ್ರಮುಖ ರೈಡರ್ ಭರತ್ ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಸೂಪರ್ ಸೂಪರ್ ಟೆನ್ ಗಳಿಸಲು ಕಷ್ಟಪಡುತ್ತಿದ್ದಾರೆ. ತಮ್ಮ ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದಾರೆ.
ಮತ್ತೊಂದೆಡೆ ಪಾಟ್ನಾ ಪೈರೇಟ್ಸ್ ತಂಡದ ಸಚಿನ್ ತನ್ವಾರ್ ಬ್ಯಾಕ್ ಟು ಬ್ಯಾಕ್ ಸೂಪರ್ ಟೆನ್ ಪಡೆಯುವುದಲ್ಲದೆ ಟ್ಯಾಕಲ್ಸ್ ಗಳಲ್ಲೂ ಭಾಗಿಯಾಗುತ್ತಿದ್ದಾರೆ. ಇಂದು ಯಾವ ತಂಡ ಜಯ ಸಾಧಿಸಲಿದೆ ಕಾದು ನೋಡಬೇಕಾಗಿದೆ.
ಪ್ರೊ ಕಬಡ್ಡಿ ಮತ್ತೊಂದು ಪಂದ್ಯದಲ್ಲಿ ಯು ಮುಂಬ ಮತ್ತು ದಬಾಂಗ್ ಡೆಲ್ಲಿ ಸೆಣಸಾಡಲಿವೆ. ಸತತ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಬಲಿಷ್ಠ ತಂಡಗಳಾಗಿ ಹೊರಹೊಮ್ಮಿರುವ ಈ ತಂಡಗಳ ಅಬ್ಬರ ನೋಡಲು ಕಬಡ್ಡಿ ಅಭಿಮಾನಿಗಳು ಕಾಯುತ್ತಿದ್ದಾರೆ.