alex Certify ಗ್ರಾಹಕರು ಸಿಗರೇಟ್ ತುಂಡು ಎಲ್ಲೆಂದರಲ್ಲಿ ಬಿಸಾಡಿದರೆ ವ್ಯಾಪಾರಸ್ಥರಿಗೆ ಭಾರಿ ದಂಡ; ಸ್ಪೇನ್‌ ಸರ್ಕಾರದ ಮಹತ್ವದ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರು ಸಿಗರೇಟ್ ತುಂಡು ಎಲ್ಲೆಂದರಲ್ಲಿ ಬಿಸಾಡಿದರೆ ವ್ಯಾಪಾರಸ್ಥರಿಗೆ ಭಾರಿ ದಂಡ; ಸ್ಪೇನ್‌ ಸರ್ಕಾರದ ಮಹತ್ವದ ತೀರ್ಮಾನ

ಸ್ಪೇನ್‌ನಲ್ಲಿನ ಹೊಸ ಪರಿಸರ ಕಾನೂನು ಜಾರಿಯಾಗಿದೆ. ಅವುಗಳಲ್ಲಿ ಒಂದು ಸಿಗರೇಟ್​ ತುಂಡುಗಳನ್ನು ಬಿಸಾಡುವುದು. ಒಂದು ವೇಳೆ ಗ್ರಾಹಕರು ಸಿಗರೇಟ್​ ತುಂಡುಗಳನ್ನು ರಸ್ತೆಯ ಮೇಲೆ ಬಿಸಾಡಿದರೆ ಅದಕ್ಕೆ ವ್ಯಾಪಾರಸ್ಥರು ದಂಡ ಕಟ್ಟಬೇಕು.

ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮರುಬಳಕೆಯನ್ನು ಹೆಚ್ಚಿಸಲು ಉದ್ದೇಶಿಸಿರುವ ಹಲವಾರು ನೀತಿಗಳನ್ನು ಮಾಡಲಾಗಿದ್ದು, ಅದರಲ್ಲಿ ಇದೂ ಒಂದು. ಹತ್ತಿ ಮೊಗ್ಗುಗಳು, ವಿಸ್ತರಿತ ಪಾಲಿಸ್ಟೈರೀನ್ ಕಪ್​ಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಏಕ-ಬಳಕೆಯ ಪ್ಲಾಸ್ಟಿಕ್ ಕಟ್ಲರಿ ಮತ್ತು ಪ್ಲೇಟ್​ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಆಹಾರ ಪ್ಯಾಕೇಜಿಂಗ್ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ.

ಶುಚಿಗೊಳಿಸುವಿಕೆಯನ್ನು ಹೇಗೆ ನಡೆಸಲಾಗುತ್ತದೆ ಅಥವಾ ಎಷ್ಟು ವೆಚ್ಚವಾಗುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಗ್ರಾಹಕರು ಸಿಗರೇಟ್​ ಅನ್ನು ಸೇದಿ ಅದರ ತುಂಡನ್ನು ಅಲ್ಲಿಯೇ ಬಿಡದಂತೆ ಅಂಗಡಿಯವರು ಎಚ್ಚರಿಕೆ ವಹಿಸಬೇಕಾಗಿದೆ. ಒಂದು ವೇಳೆ ಅಂಗಡಿ ಎದುರೇನಾದರೂ ಹೀಗೆ ಸಿಗರೇಟ್​ ತುಂಡು ಕಂಡುಬಂದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ.

ಸಿಗರೇಟ್ ತುದಿಗಳಿಂದ ಸೀಸದಂತಹ ಹಾನಿಕಾರಕ ರಾಸಾಯನಿಕ ಹೊರಬರುತ್ತದೆ. ಇದು ಪರಿಸರದ ಜೊತೆ ಸೇರಿದಾಗ ಅದನ್ನು ಹೊರಹಾಕಲು ಸುಮಾರು 10 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಕಟ್ಟುನಿಟ್ಟಿನ ಕ್ರಮ ಎಂದು ಸ್ಪೇನ್​ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...