
ಕೊರೊನಾ ನಂತರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಮನೆಯಲ್ಲಿಯೇ ಕುಳಿತು ಜನರು ಕೆಲಸ ಮಾಡ್ತಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಜನರಿಗೆ ಕಚೇರಿಯಂತಾಗ್ತಿಲ್ಲ. ಅನೇಕರು ಬ್ರೇಕ್ ಇಲ್ಲದೆ ಕೆಲಸ ಮಾಡ್ತಿದ್ದಾರೆ. ಇದು ಕಣ್ಣಿನ ಮೇಲೆ ಪರಿಣಾಮ ಬೀಳ್ತಿದೆ. ಹಾಗಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಕಂಪ್ಯೂಟರ್ ಪರದೆ ನೋಡಿ ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆಗಾಗ ಬಾಲ್ಕನಿಗೆ ಹೋಗಿ ಕಣ್ಣಿಗೆ ವಿಶ್ರಾಂತಿ ನೀಡಬೇಕು. ಬಾಲ್ಕನಿ ಇಲ್ಲ ಎನ್ನುವವರು ಟೀ, ಕಾಫಿ ಅಥವಾ ಜ್ಯೂಸ್ ಸೇವನೆ ಮಾಡುತ್ತ ಕಿಟಕಿಯಿಂದ ದೂರದವರೆಗೆ ದೃಷ್ಟಿ ಹರಿಸಬಹುದು. 2-3 ನಿಮಿಷಗಳ ಕಾಲ ಹೀಗೆ ಮಾಡುವುದು ಬಹಳ ಮುಖ್ಯ.
ಕೆಲಸ ಮಾಡಿ ಕಣ್ಣಿಗೆ ಒತ್ತಡ ಬೀಳುತ್ತದೆ. ಇದ್ರಿಂದ ಕಣ್ಣಿನ ಉರಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕಣ್ಣಿನ ಮೇಲೆ ಸೌತೆಕಾಯಿ ತುಂಡು ಅಥವಾ ಹತ್ತಿ ಸಹಾಯದಿಂದ ರೋಸ್ ವಾಟರ್ ಇಟ್ಟುಕೊಳ್ಳಿ. ಹೀಗೆ ಮಾಡಿ 5 ನಿಮಿಷದವರೆಗೆ ಕಣ್ಣಿಗೆ ವಿಶ್ರಾಂತಿ ನೀಡಿ.
ಕಣ್ಣಿನ ಆರೋಗ್ಯಕ್ಕೆ ಸಮಯ ನೀಡಬೇಕು. ಕಣ್ಣಿನ ವ್ಯಾಯಾಮವನ್ನು ಮಾಡಿ. ಕಣ್ಣನ್ನು ಹತ್ತು ಬಾರಿ ಮೇಲೆ ಕೆಳಗೆ ಮಾಡಿ. ಮತ್ತೆ ಹತ್ತು ಬಾರಿ ಆ ಕಡೆ, ಈ ಕಡೆ ನೋಡಿ. ಎರಡೂ ಕೈಗಳನ್ನು ಉಜ್ಜಿ ಕೈಯನ್ನು ಕಣ್ಣಿನ ಮೇಲಿಡಿ.
ಕತ್ತಲ ಕೋಣೆಯಲ್ಲಿ ಮೊಬೈಲ್ ಅಥವಾ ಟಿವಿ ವೀಕ್ಷಣೆ ಮಾಡಬೇಡಿ. ಟಿವಿ ಅಥವಾ ಮೊಬೈಲ್ ನೋಡುವಾಗ ಕೋಣೆಯಲ್ಲಿ ಸಣ್ಣ ಬೆಳಕು ಇರುವಂತೆ ನೋಡಿಕೊಳ್ಳಿ.
ಕಣ್ಣಿನ ಆರೋಗ್ಯಕ್ಕೆ ಅಗತ್ಯವಿರುವ ಆಹಾರವನ್ನು ಸೇವನೆ ಮಾಡಿ. ವಿವಿಧ ಹಣ್ಣುಗಳು, ಮೀನು, ಮೊಟ್ಟೆ ಸೇವನೆ ಮಾಡಿ. ಸತು, ವಿಟಮಿನ್ ಎ, ಆಂಟಿಆಕ್ಸಿಡೆಂಟ್ ಸಮೃದ್ಧ ಆಹಾರ ಸೇವಿಸಿ.